ಶತಕ ದಾಟಿದ ಈರುಳ್ಳಿ ಬೆಲೆ ದರ ಏರಿಕೆಗೆ ಖಂಡನೆ
Update: 2019-11-27 22:02 IST
ಉಡುಪಿ, ನ.27: ದಿನನಿತ್ಯದ ಆಹಾರದಲ್ಲಿ ಬಳಕೆಯಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ನೀರುಳ್ಳಿಯನ್ನ ಬಳಕೆ ಮಾಡುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಈರುಳ್ಳಿಬೆಲೆ ಏರಿಕೆಯ ಬಿಸಿ ತಟ್ಟದೆ.
ಈ ಹಿಂದೆ ಕೇಂದ್ರದ ಸರಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾದಾಗ ಅಂದು ವಿದ್ಯೆ ಕಲಿತ ಸಾವಿರಾರು ನಿರುದ್ಯೋಗಿಗಳು ಕೆಲಸ ಸಿಗದಿದ್ದರೆ ಪಕೋಡಾ ಮಾರಿ ಜೀವನ ಸಾಗಿಸಿ.. ಅಂದವರೂ ನೀರುಳ್ಳಿ ಬೆಲೆ ಏರಿಕೆಯಿಂದ ಕಂಗಾಲು ಆಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಜಯ ಶೆಟ್ಟಿ ಬನ್ನಂಜೆ, ಗಣೇಶ್‌ರಾಜ್ ಸರಳೇಬೆಟ್ಟು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ ಎಂದಿದ್ದಾರೆ.