ಮುಲ್ಕಿ : ಐದನೇ ತರಗತಿಯ ಬಾಲಕಿ ಆತ್ಮಹತ್ಯೆ

Update: 2019-11-28 06:03 GMT

ಮುಲ್ಕಿ : ಐದನೇ ತರಗತಿಯ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಘಟನೆ ಮೂರು ಕಾವೇರಿ ಸಮೀಪದ ಕಮ್ಮಾಜೆ ಎಂಬಲ್ಲಿ ಬುಧವಾರ ನಡೆದಿದೆ.

ಅತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ದ್ರುವಿ (10) ಎಂದು ಗುರುತಿಸಲಾಗಿದೆ. ಆಕೆ ಕಿನ್ನಿಗೋಳಿಯ ಸೈಂಟ್ ಮೇರಿಸ್ ಅಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯಲ್ಲಿ ಕಲಿಯುತ್ತಿದ್ದಳು.

ನಿನ್ನೆ ದಾಮಸ್ಕಟ್ಟೆಯ ಕಿರೆಂ ಚರ್ಚ್ ನ ವಾರ್ಷಿಕ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದು, ದ್ರುವಿ ಸಂಜೆ ಅಜ್ಜಿ ಮನೆಯಲ್ಲಿ ಟಿವಿ ನೊಡುತ್ತಿದ್ದಳು. ಈ ಸಂದರ್ಭ ಕರೆಂಟ್ ಹೋಗಿದ್ದು, ಈ ವೇಳೆ ಅಜ್ಜಿ ದ್ರುವಿಗೆ ಓದುವಂತೆ ಸೂಚಿಸಿದ್ದಾರೆ. ದ್ರುವಿ ಮನೆಯ ಕೋಣೆಗೆ ಹೋದವಳು ಕರೆಂಟ್ ಬಂದಾಗಲೂ ಹೊರ ಬರಲಿಲ್ಲ ಎನ್ನಲಾಗಿದ್ದು, ಇದನ್ನು ಗಮನಿಸಿದ ಅಜ್ಜಿ ಕೋಣೆಗೆ ಬಂದು ನೋಡಿದ ವೇಳೆ ಬಾಲಕಿ ಅತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಅವರು ತಿಳಿಸಿದ್ದಾರೆ.

ತಲೆಗೆ ಕಟ್ಟುವ ರಿಬ್ಬನ್ ನ್ನು ಕೊಣೆಯ ಕಿಟಕಿಗೆ ಕಟ್ಟಿ ಕುತ್ತಿಗೆಗೆ ಹಾಕಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ. ಘಟನೆಯ ಬಗ್ಗೆ ಮುಲ್ಕಿ ಪೊಲೀಸರು ಪ್ರಕರಣ ದಾಖಾಲಿಸಿ, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News