×
Ad

ಅಂಡರ್‌ಪಾಸ್ ನಿರ್ಮಾಣ: ರಸ್ತೆ ಸಂಚಾರದಲ್ಲಿ ಬದಲಾವಣೆ

Update: 2019-11-27 22:35 IST

ಮಂಗಳೂರು, ನ. 27: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಪಾದಚಾರಿಗಳ ಭೂಗತ ಮಾರ್ಗದ ಕಾಮಗಾರಿಯನ್ನು ನಗರದ ಕ್ಲಾಕ್ ಟವರ್ ವೃತ್ತದ ಸಮೀಪ ನ.28ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ನಗರದ ಎ.ಬಿ.ಶೆಟ್ಟಿ ಸರ್ಕಲ್‌ನಿಂದ ಗಡಿಯಾರ ಗೋಪುರದ ಕಡೆಗೆ ಹಾದು ಹೋಗುವ ರಸ್ತೆಯನ್ನು ಮುಚ್ಚಲಾಗುವುದು.
 ನಗರದ ಆರ್‌ಟಿಒ ಸರ್ಕಲ್‌ನಿಂದ ಗಡಿಯಾರ ಗೋಪುರದ ಕಡೆಗೆ ಹಾದು ಹೋಗುವ ರಸ್ತೆಯನ್ನು ಮುಚ್ಚಲಾಗುವುದು. ಸಾರ್ವಜನಿಕರು ಆರ್‌ಟಿಒ ಸರ್ಕಲ್‌ನಿಂದ ಸ್ಟೇಟ್ ಬ್ಯಾಂಕ್ ಮೂಲಕ ಪ್ರಯಾಣಿಸಲು ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರು ಕಾಮಗಾರಿ ಮುಗಿಯುವವರೆಗೆ ಸಹಕರಿಸಲು ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News