ಬೆಳ್ತಂಗಡಿ: ನ. 28ರಿಂದ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ವಾರ್ಷಿಕೋತ್ಸವ

Update: 2019-11-27 17:30 GMT

ಬೆಳ್ತಂಗಡಿ:  ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಮೂರನೇ ವಾರ್ಷಿಕೋತ್ಸವ ಹಾಗೂ ಶಂಸುಲ್ ಉಲಮಾ ಆಂಡ್ ನೇರ್ಚೆ ನ. 28 ರಿಂದ ಡಿ. 1ರ ತನಕ ಬೆಳ್ತಂಗಡಿ ಖಿಳ್‍ರ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ನ.28ರಂದು ಸಂಜೆ ಸಯ್ಯಿದ್ ಅಕ್ರಂ ಅಲಿ ಅಲ್‍ಹಾದಿ ತಂಙಳ್ ಕರಾವಳಿ ನೇತೃತ್ವದಲ್ಲಿ ಗುರುವಾಯನಕೆರೆ ದರ್ಗ ಝಿಯಾರತ್‍ ನೊಂದಿಗೆ ಆರಂಭಗೊಳ್ಳಲಿದೆ. ಬೆಳ್ತಂಗಡಿ ಖತೀಬ್ ಅಬ್ಬಾಸ್ ಫೈಝಿ ಧ್ವಜಾರೋಹಣಗೆಯ್ಯಲಿದ್ದು, ಮಗ್‍ರಿಬ್ ನಂತರ ಜಲಾಲಿಯ ರಾತೀಬ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ಜರಗಲಿದ್ದು, ಆದಂ ದಾರಿಮಿ ಕೊಡಾಜೆ, ಐ.ಕೆ. ಮೂಸಾ ದಾರಿಮಿ ಕಕ್ಕಿಂಜೆ, ಮಹಮ್ಮದ್ ಹಾಜಿ ಬಿ.ಎಂ. ಗಣ್ಯ ಉಪಸ್ಥಿತರಿರುತ್ತಾರೆ.

ನ.29 ರಂದು ಸಂಜೆ ದಾರುಸ್ಸಲಾಂ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭೋತ್ಸವ ಹಾಗೂ ಬುರ್ದಾ ಮಜ್ಲಿಸ್ ಜರಗಲಿದೆ. ನ.30ರಂದು  ಮಗ್‍ರಿಬ್ ನಮಾಝಿನ ನಂತರ ಧಾರ್ಮಿಕ ಮತಪ್ರವಚನ ಜರಗಲಿದೆ. ಸಯ್ಯಿದ್ ಕುಂಞಿ ಕೋಯ ತಂಙಳ್ ಜಿಫ್ರಿ ಮಲಪ್ಪುರಂ ಉದ್ಘಾಟಿಸಲಿದ್ದು, ಉಸ್ತಾದ್ ವಲಿಯುದ್ದೀನ್ ಫೈಝಿ ಕೇರಳ ಮುಖ್ಯ ಭಾಷಣಗೈಯಲಿದ್ದಾರೆ.

ಡಿ.1 ರಂದು  ಬೆಳಿಗ್ಗೆ ಖತ್‍ಮುಲ್ ಖುರ್‍ಆನ್ ಹಾಗೂ ಶಂಸುಲ್ ಉಲಮಾ ಆಂಡ್ ನೇರ್ಚೆ ಶಂಸುಲ್ ಉಲಮರ ಮೊಮ್ಮಗ ಆಮಿಲ್ ದಾರಿಮಿ ಕಲ್ಲಿಕೋಟೆ ನೇತೃತ್ವದಲ್ಲಿ ಜರಗಲಿದ್ದು ಅಬ್ದುಲ್ ವಾಹಿದ್ ಮುಸ್ಲಿಯಾರ್ ಅತ್ತಿಪಟ್ಟ ಅನುಗ್ರಹ ಭಾಷಣ ಮಾಡಲಿದ್ದು, ಉಮರುಲ್ ಫಾರುಕ್ ಹುದವಿ ಫತ್ಹುಲ್ ಫತ್ತಾಹ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ ದಾರುಸ್ಸಲಾಂ ಮುದರ್ರಿಸ್ ಅಬ್ದುಸ್ಸಮದ್ ದಾರಿಮಿ ನೇತೃತ್ವದಲ್ಲಿ ತ್ವಲಬಾ ಮತ್ತು ಕ್ಯಾಂಪಸ್ ಸಂಗಮ ಜರಗಲಿದೆ.

ಸಂಜೆ ಬೃಹತ್ ಜಮಾಅತ್ ಮುಖಂಡರ ಸಭೆ ಜರಗಲಿದ್ದು, ಬೆಳ್ತಂಗಡಿ ಜುಮಾ ಮಸೀದಿ ಅಧ್ಯಕ್ಷ ನಝೀರ್ ಬಿ.ಎ. ಅಧ್ಯಕ್ಷತೆ ವಹಿಸಲಿದ್ದು, ಹಸನಬ್ಬ ಚಾರ್ಮಾಡಿ, ಸ್ವಾಗತಿಸಲಿದ್ದಾರೆ, ಅಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಅಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಉದ್ಘಾಟಿಸಲಿದ್ದು, ಅಸಯ್ಯಿದ್ ಅಬ್ದುರ್ರಹ್ಮಾನ್ ಬಾಅಲವಿ ಸಾದಾತ್ ತಂಙಳ್ ಗುರುವಾಯನಕೆರೆ ಮತ್ತು ಅಸಯ್ಯಿದ್ ಇಸ್ಮಾಯಿಲ್ ಅಲ್‍ಹಾದಿ ತಂಙಳ್ ಮದನಿ ಉಜಿರೆ ಅನುಗ್ರಹ ಭಾಷಣ ಮಾಡಲಿದ್ದು, ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್‍ಖಾಸಿಮಿ ಬಂಬ್ರಾಣ ಮುಖ್ಯ ಭಾಷಣಗೈಯಲಿದ್ದಾರೆ.

ಮಗ್ರಿಬ್ ನಮಾಜಿನ ನಂತರ ಅಶ್ರಫ್ ರಹ್ಮಾನಿ ಕಾಸರಗೋಡು ಧಾರ್ಮಿಕ ಮತ ಪ್ರವಚನ ಮಾಡಲಿದ್ದು ನಂತರ ಅಂಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸುನ್ನೂರು ಜರಗಲಿದೆ ಎಂದು ಸ್ವಾಗತ ಸಮಿತಿಯ ಕನ್ವೀನರ್ ಬಶೀರ್ ದಾರಿಮಿ ಬೆಳ್ತಂಗಡಿ, ವೈಸ್ ಕನ್ವೀನರ್ ಶರೀಫ್ ಕಕ್ಕಿಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News