×
Ad

ನಾಳೆಯಿಂದ ಇನ್ನರ್ ವ್ಹೀಲ್ 50ನೆ ಜಿಲ್ಲಾ ಸಮ್ಮೇಳನ

Update: 2019-11-28 19:49 IST

ಉಡುಪಿ, ನ.28: ಉಡುಪಿ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಇನ್ನರ್ ವ್ಹೀಲ್ ಜಿಲ್ಲೆ 318ರ 50ನೇ ಜಿಲ್ಲಾ ಸಮ್ಮೇಳನ ‘ಔರಮ್ ಗೋಲ್ಡನ್ ಹೆಲೋ’ ನ.30 ಮತ್ತು ಡಿ.1ರಂದು ಮಲ್ಪೆಯ ಪಾರಡೈಸ್ ಐಲ್ ಹೋಟೆಲ್‌ನಲ್ಲಿ ಜರಗಲಿದೆ.

ಸಮ್ಮೇಳನವನ್ನು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ ಪ್ರಾಧ್ಯಾಪಕಿ ನಂದಿನಿ ಲಕ್ಷ್ಮೀಕಾಂತ್ ಉದ್ಘಾಟಿಸಲಿರುವರು. ರೋಟರಿ ಜಿಲ್ಲೆ 3181ರ ಗವರ್ನರ್ ಜೋಸೆಫ್ ಮ್ಯಾಥ್ಯೂ ವಿಶೇಷ ಪತ್ರಿಕೆಯನ್ನು ಬಿಡುಗಡೆಗೊಳಿಸಲಿರು ವರು. ಸುಮಾರು 400 ಇನ್ನರ್ ವ್ಹೀಲ್ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ರಾಜಲಕ್ಷ್ಮೀ ಡಿ. ಶೆಟ್ಟಿ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶುಭಾ ಎಸ್.ಬಾಸ್ರಿ, ಸಮ್ಮೇಳನ ಕಾರ್ಯದರ್ಶಿ ವೈಷ್ಣವಿ ಆಚಾರ್ಯ, ಮಾಜಿ ಅಧ್ಯಕ್ಷೆ ರಾಧಿಕ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News