ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ : 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ದಾಟಿದ ಮೊದಲ ಭಾರತೀಯ ಸಂಸ್ಥೆ

Update: 2019-11-28 15:09 GMT

ಹೊಸದಿಲ್ಲಿ, ನ.28: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಗುರುವಾರ ಹೊಸ ದಾಖಲೆಯೊಂದನ್ನು ಸ್ಥಾಪಿಸಿದೆ. ಶೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಒಂದು ಶೇರಿನ ಮೌಲ್ಯ 1,581 ರೂ.ಗೆ ಏರಿಕೆಯಾಗುವುದರೊಂದಿಗೆ 10 ಲಕ್ಷ ಕೋಟಿ ರೂ. ಮಾರುಕಟ್ಟೆ ವೌಲ್ಯ ದಾಟಿದ ಮೊತ್ತಮೊದಲ ಭಾರತೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ರೂ. ಗಡಿಯನ್ನು ದಾಟುವ ಮೂಲಕ ಅತ್ಯಮೂಲ್ಯ ಕಂಪೆನಿ ಎನಿಸಿಕೊಂಡಿದೆ. ಸೆಪ್ಟೆಂಬರ್ 30ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿಯ ಆರ್ಥಿಕ ಫಲಿತಾಂಶದ ವಿವರವನ್ನು ಸಂಸ್ಥೆ ಪ್ರಕಟಿಸಲಿದೆ. ಕೇವಲ 25 ವ್ಯವಹಾರದ ದಿನ(ಶೇರುಮಾರುಕಟ್ಟೆ ವ್ಯವಹಾರದ ದಿನ)ಗಳಲ್ಲೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ರೂ.ನಿಂದ 10 ಲಕ್ಷ ಕೋಟಿ ರೂ. ಗಡಿ ದಾಟಿದೆ.

  ನವೆಂಬರ್ 27ರಂದು ಬಿಡುಗಡೆಯಾಗಿರುವ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿಯ ಒಟ್ಟು ಆಸ್ತಿಯ ವೌಲ್ಯ 60.7 ಬಿಲಿಯನ್ ಡಾಲರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News