×
Ad

16.34 ಕೋ. ಗ್ರಾಮೀಣ ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿವೆ: ಕೇಂದ್ರ

Update: 2019-11-28 21:25 IST

ಹೊಸದಿಲ್ಲಿ, ನ.28: ದೇಶದಲ್ಲಿ 16.34 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳು ಶೌಚಾಲಯ ಸೌಲಭ್ಯವನ್ನು ಹೊಂದಿದ್ದು,ಈ ಪೈಕಿ ಅತ್ಯಂತ ಹೆಚ್ಚು ಕುಟುಂಬಗಳು ಉತ್ತರ ಪ್ರದೇಶದಲ್ಲಿವೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.

ಈ ಪೈಕಿ 2.84 ಕುಟುಂಬಗಳು ಉತ್ತರ ಪ್ರದೇಶದಲ್ಲಿದ್ದರೆ ಬಿಹಾರದಲ್ಲಿ 1.59 ಕೋ.ಮತ್ತು ಪಶ್ಚಿಮ ಬಂಗಾಳದಲ್ಲಿ 1.37 ಕೋ. ಕುಟುಂಬಗಳಿವೆ ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಯಾವುದೇ ಸಾರ್ವತ್ರಿಕ ನೈರ್ಮಲ್ಯ ಸಮೀಕ್ಷಾ ವರದಿಯನ್ನು ಪ್ರಕಟಿಸಿಲ್ಲ. ಆದರೂ ಬಯಲುಶೌಚ ಮುಕ್ತ ಸ್ಥಿತಿಯನ್ನು ಮುಂದುವರಿಸಲು ಮತ್ತು ಶೌಚಾಲಯ ಸೌಲಭ್ಯದಿಂದ ಯಾರೊಬ್ಬರೂ ವಂಚಿತಗೊಂಡಿಲ್ಲ ಎನ್ನುವುದನ್ನು ಖಚಿತಪಡಿಸಲು ಸರಕಾರವು ಯಾವುದೇ ಗ್ರಾಮೀಣ ಕುಟುಂಬವು ಬಿಟ್ಟುಹೋಗಿದೆಯೇ ಎನ್ನುವುದನ್ನು ಗುರುತಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News