ಜಿಂಕೆ ಕೊಂಬು ವಶ: ಆರೋಪಿ ಪರಾರಿ
Update: 2019-11-28 21:38 IST
ಮಣಿಪಾಲ, ನ.28: ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಮೀಪದ ನಂದಿನಿ ಮಿಲ್ಕ್ ಪಾರ್ಲರ್ ಬಳಿ ನ.27ರಂದು ರಾತ್ರಿ 9ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಮಾರಾಟ ಮಾಡಲು ಯತ್ನಿಸುತ್ತಿದ್ದ ಎರಡು ಜಿಂಕೆ ಕೊಂಬುಗಳನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಕಾರ್ಕಳದ ರಿಚರ್ಡ್ ಎಂಬಾತ ಪೊಲೀಸ್ ದಾಳಿ ವೇಳೆ ಪರಾರಿ ಯಾಗಿದ್ದಾನೆ. ಈತ ದ್ವಿಚಕ್ರ ವಾಹನದಲ್ಲಿ ಜಿಂಕೆ ಕೊಂಬುಗಳನ್ನು ಮಾರಾಟ ಯತ್ನಿಸುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆಗಮಿಸಿದ್ದು, ಈ ವೇಳೆ ಆತ ದ್ವಿಚಕ್ರ ವಾಹನ ಹಾಗೂ ಬ್ಯಾಗ್‌ನ್ನು ಬಿಟ್ಟು ಜಿಲ್ಲಾಧಿಕಾರಿ ಕಚೇರಿಯ ಕೆಳ ರಸ್ತೆಯಲ್ಲಿ ಕತ್ತಲಲ್ಲಿ ಓಡಿ ಹೋಗಿದ್ದಾನೆ.
ಬ್ಯಾಗ್‌ನಲ್ಲಿ 13 ಇಂಚು ಮತ್ತು ಎಂಟು ಇಂಚು ಉದ್ದದ ಎರಡು ಜಿಂಕೆಯ ಕೊಂಬುಗಳನ್ನು ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.