ಸರಕಾರಿ ಇಲಾಖೆಗಳ ವೆಬ್ ಸೈಟ್ ಕೂಡ ಸುರಕ್ಷಿತವಲ್ಲ !

Update: 2019-11-28 16:09 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ, ನ.28: ಈ ವರ್ಷದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯಸರಕಾರಿ ಇಲಾಖೆಗಳ 48 ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

 ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ(ಸಿಇಆರ್‌ಟಿ-ಇನ್)ನ ವರದಿಯ ಪ್ರಕಾರ, 2018ರಲ್ಲಿ 110 ಮತ್ತು 2019ರ ಅಕ್ಟೋಬರ್‌ವರೆಗಿನ ಅವಧಿಯಲ್ಲಿ 48 ವೆಬ್‌ಸೈಟ್‌ಗಳನ್ನು (ಕೇಂದ್ರ ಸಚಿವಾಲಯ, ಇಲಾಖೆ ಮತ್ತು ರಾಜ್ಯ ಸಚಿವಾಲಯದ ವೆಬ್‌ಸೈಟ್‌ಗಳು)ಹ್ಯಾಕ್ ಮಾಡಲಾಗಿದೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಯ ಸಹಾಯಕ ಸಚಿವ ಸಂಜಯ್ ಧೋತ್ರೆ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದ ಸೈಬರ್‌ ವಲಯದ ಮೇಲೆ ದಾಳಿ ನಡೆಸಲು ಆಗಿಂದಾಗ್ಗೆ ಪ್ರಯತ್ನ ನಡೆಯುತ್ತಿದೆ. ಸೈಬರ್ ದಾಳಿಕೋರರು ವಿಶ್ವದ ವಿವಿಧೆಡೆ ಇರುವ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ವ್ಯವಸ್ಥಿತ ತಂತ್ರಗಾರಿಕೆ ಮತ್ತು ಗುಪ್ತ ಸರ್ವರ್ ಮೂಲಕ ಗುರುತನ್ನು ಮರೆಮಾಚಿಕೊಂಡು ಸೈಬರ್ ದಾಳಿ ನಡೆಸುತ್ತಾರೆ. ಸಿಇಆರ್‌ಟಿ-ಇನ್ ಪಡೆದಿರುವ ಮಾಹಿತಿಯಂತೆ ಚೀನಾ, ಪಾಕಿಸ್ತಾನ, ನೆದರ್ಲಾಂಡ್, ಫ್ರಾನ್ಸ್, ತೈವಾನ್, ಟ್ಯುನೀಷಿಯಾ, ರಶ್ಯ, ಅಲ್ಜೀರಿಯಾ ಮತ್ತು ಸರ್ಬಿಯಾ ದೇಶಗಳಲ್ಲಿ ಈ ಸೈಬರ್‌ದಾಳಿಯ ಮೂಲವಿದೆ ಎಂದು ಸಚಿವರು ತಿಳಿಸಿದ್ದಾರೆ. ಸೈಬರ್ ದಾಳಿಯ ಮೂಲಗಳಿವೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News