ಟ್ಯಾಂಕ್ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿ

Update: 2019-11-28 16:25 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ.28: ದೂರವ್ಯಾಪ್ತಿಯ ಟ್ಯಾಂಕ್ ನಿರೋಧಕ ಕ್ಷಿಪಣಿ ಸ್ಪೈಕ್ ಎಲ್‌ಆರ್‌ನ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ ಎಂದು ಭಾರತೀಯ ಸೇನಾಪಡೆ ತಿಳಿಸಿದೆ.

ಮಧ್ಯಪ್ರದೇಶದ ಮಹಾವುನಲ್ಲಿರುವ ಸೈನಿಕ ಶಾಲೆಯಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪರೀಕ್ಷಾ ಪ್ರಯೋಗ ನಡೆದಿದ್ದು ಕಾರ್ಯಕ್ರಮದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಹಿತ ಸೇನಾಪಡೆಯ ಅಧಿಕಾರಿಗಳು , ಯೋಧರು ಭಾಗವಹಿಸಿದ್ದರು.

4 ಕಿ.ಮೀ ವರೆಗಿನ ಗುರಿಯನ್ನು ನಿಖರವಾಗಿ ತಲುಪಬಲ್ಲ ಸ್ಪೈಕ್ ಎಲ್‌ಆರ್ ಕ್ಷಿಪಣಿ ಯು ದಾಳಿಯ ಜೊತೆಗೆ ಉದ್ದೇಶಿತ ಗುರಿಯ ಸ್ಥಾನವನ್ನು ಗುರುತಿಸುವ ಜೊತೆಗೆ ಗುರಿಯನ್ನು ಪರಿಷ್ಕರಿಸುವ ವ್ಯವಸ್ಥೆಯನ್ನೂ ಹೊಂದಿದೆ. ಹಗಲು ಮತ್ತು ರಾತ್ರಿ ಹೊತ್ತು ದಾಳಿ ನಡೆಸಬಲ್ಲ ವ್ಯವಸ್ಥೆ, ಕ್ಷಿಪಣಿಯನ್ನು ಎತ್ತರದ ಅಥವಾ ಕೆಳಮಟ್ಟದ ಪ್ರಕ್ಷೇಪ ಪಥದಲ್ಲಿ ಸಿಡಿಸುವ ವ್ಯವಸ್ಥೆಯಿದೆ. ಇದುವರೆಗೆ ವಿಶ್ವದಾದ್ಯಂತ 5000ಕ್ಕೂ ಅಧಿಕ ಸ್ಪೈಕ್ ಕ್ಷಿಪಣಿಗಳನ್ನು ಸಿಡಿಸಲಾಗಿದ್ದು 95%ಕ್ಕೂ ಹೆಚ್ಚು ಕ್ಷಿಪಣಿಗಳು ಉದ್ದೇಶಿತ ಗುರಿಗೆ ಬಡಿದಿವೆ ಎಂದು ಸೇನಾಪಡೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News