×
Ad

ನಿರುದ್ಯೋಗಿ ಯುವಕ/ ಯುವತಿಯರಿಗೆ ಉಚಿತ ತರಬೇತಿ

Update: 2019-11-28 22:04 IST

ಉಡುಪಿ, ನ.28: ಕೇಂದ್ರೀಯ ಪ್ಲಾಸ್ಟಿಕ್ಸ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಮೈಸೂರಿನಲ್ಲಿ ಕರ್ನಾಟಕ ರಾಜ್ಯದ (ಎಸೆಸೆಲ್ಸಿ, ಪಿಯುಸಿ, ಐಟಿಐ, ಜೆಒಸಿ, ಡಿಪ್ಲೋಮಾ, ಬಿಇ, ಯಾವುದೇ ಪದವಿ) ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ಮೈಸೂರಿನಲ್ಲಿ ವಿವಿಧ ವೃತ್ತಿಪರ ಯೋಜನೆಯಡಿ ಮೂರು ಮತ್ತು ಆರು ತಿಂಗಳ ಆವಧಿಯ ಪಾಲಿಮರ್ ವಸ್ತುಗಳ ತಯಾರಿಕ ತಂತ್ರಜ್ಞಾನ, ವಾಹನಗಳ ಬಿಡಿಭಾಗಗಳು, ವಿದ್ಯುತ್ ಉಪಕರಣಗಳು, ಕಂಪ್ಯೂಟರ್ ಬಿಡಿಭಾಗಗಳು ಇತ್ಯಾದಿ ವಸ್ತುಗಳ ತಯಾರಿಕೆ ಬಗ್ಗೆ ಉಚಿತ ತರಬೇತಿಯನ್ನು ಉಚಿತ ಊಟ, ವಸತಿಯೊಂದಿಗೆ ನೀಡಲಾ ಗುವುದು ಹಾಗೂ ಉದ್ಯೋಗಾವಾಶಕ್ಕೆ ನೆರವು ನೀಡಲಾಗುವುದು.

ಆಸಕ್ತಿಯುಳ್ಳ ಅ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂದಿಸಿದ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮೂಲ ದಾಖಲೆ, 04 ಪಾಸ್‌ಪೋರ್ಟ್ ಅಳತೆಯ ಪೋಟೊದೊಂದಿಗೆ ನೇರವಾಗಿ ಬಂದು ದಾಖಲಾತಿ ಪಡೆಯಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಪ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು, ದೂರವಾಣಿ ಸಂಖ್ಯೆ: 7899986444, 9141075968, 906664866ನ್ನು ಸಂಪರ್ಕಿುವಂತೆ ಸಿಪೆಟ್‌ನ ಪ್ರಕಟಣೆ ತಿಳಿಸಿದೆ.ಸಂಪರ್ಕಿಸುವಂತೆ ಸಿಪೆಟ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News