×
Ad

ಕಲಾ ಸಾಧಕರಿಗೆ ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ

Update: 2019-11-28 22:06 IST

ಮಲ್ಪೆ, ನ. 28:ಕೊಡವೂರು ನೃತ್ಯನಿಕೇತನ ಸಂಸ್ಥೆಯು ಸ್ಥಾಪಕ ಕೊಡವೂರು ಸಾಲುಮರ ಕೃಷ್ಣಮೂರ್ತಿರಾಯರ ಹೆಸರಿನಲ್ಲಿ ನೀಡುವ ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತ ರವೀಂದ್ರ ಮಂಟಪದಲ್ಲಿ ಜರಗಿತು.

ಹಿರಿಯ ಸಾಧಕರಾದ ವಿದ್ವಾನ್ ಕೊಳಲು ರಾಘವೇಂದ್ರ ರಾವ್, ವಿದ್ವಾನ್ ನಾರಾಯಣ ಭಟ್, ವಿದ್ವಾನ್ ಶ್ರೀನಿವಾಸ್ ಭಟ್, ಪ್ರಕಾಶ್ ಕುಂಜಿಬೆಟ್ಟು ಅವರಿಗೆ ಕೃಷ್ಣಪ್ರೇಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ಮಂಗಳೂರಿನ ಹಿರಿಯ ಗುರು ನಾಟ್ಯಾಚಾರ್ಯ ಉಲ್ಲಾಳ್ ಮೋಹನ್‌ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷ ಕಮಲಾಕ್ಷ ಆಚಾರ್, ಕಾರ್ಯದರ್ಶಿ ಗಳಾದ ವಿದ್ವಾನ್ ಚಂದ್ರಶೇಖರ್ ನಾವಡ, ಪ್ರತಿಭಾ ಎಲ್.ಸಾಮಗ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕ ಸುಧೀರ್ ಸ್ವಾಗತಿಸಿದರು. ವಿದುಷಿ ಮಾನಸಿ ಸುಧೀರ್ ವಂದಿಸಿದರು. ಭಾವನ ಕೆರೆಮಠ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೊಡವೂರು ನೃತ್ಯನಿಕೇತನ ಸಂಸ್ಥೆಯ ಕಲಾವಿದರಿಂದ ನೃತ್ಯ ಭಗಿನಿ ನೃತ್ಯ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News