×
Ad

ಬೋಸ್ಕೋಸ್ ಪಿಯು ಕಾಲೇಜು ನೂತನ ಕ್ಯಾಂಪಸ್ ಉದ್ಘಾಟನೆ

Update: 2019-11-28 22:39 IST

ಮಂಗಳೂರು, ನ.28: ಬೋಸ್ಕೋಸ್ ಪದವಿ ಪೂರ್ವ ಕಾಲೇಜಿನ ನೂತನ ಕ್ಯಾಂಪಸ್ ನಗರದ ಹರಿಪದವು ಬ್ಲೂಬೆರ್ರಿ ಹಿಲ್ಸ್‌ನಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಮುಖ್ಯಅತಿಥಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ವೃತ್ತಿಪರ ಯಶಸ್ಸು ಲಭಿಸುತ್ತದೆ. ಸಂತೃಪ್ತಿ ನಿಷ್ಠೆ ಹಾಗೂ ದಯಾಪರ ನಡವಳಿಕೆಯಿಂದ ಯಶಸ್ಸು ಸುಲಭ ಸಾಧ್ಯವಾಗುತ್ತದೆ ಎಂದರು.

ಪಿಯುಸಿ ಪ್ರತಿಯೋರ್ವ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಂತ ಮಹತ್ವವಾದ ಘಟ್ಟವಾಗಿದೆ. ಜತೆಗೆ ಅಷ್ಟೇ ಸವಾಲಿನದ್ದಾಗಿದೆ. ಈ ಅವಧಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವುದು ಅಗತ್ಯ. ಈ ಕ್ಯಾಂಪಸ್‌ನ ಶಿಕ್ಷಣ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಬೋಸ್ಕೋ ಅವರು ಉತ್ತಮ ವಾಗ್ಮಿ, ಉಪನ್ಯಾಸಕ, ಬರಹಗಾರರಾಗಿದ್ದು, ಹೆಸರಾಂತ ಶಿಕ್ಷಣಪ್ರೇಮಿಯಾಗಿದ್ದಾರೆ. ಉತ್ತಮ ಗುಣಮಟ್ಟದ ಜ್ಞಾನವನ್ನು ಪರಿಣಾಮಕಾರಿ ಹಂಚುವ ಹಾಗೂ ಕಲಿಕೆ ಜತೆ ವಿದ್ಯಾರ್ಥಿಗಳಲ್ಲಿ ಉತ್ತಮ ಭಾವನೆ ಬೆಳೆಸುವ ಶಕ್ತಿಯನ್ನು ಅವರು ಹೊಂದಿದ್ದಾರೆ ಎಂದು ಶ್ಲಾಘಿಸಿದರು.

ಮುಖ್ಯಅತಿಥಿ ಮಂಗಳೂರು ಪಿಯು ಮಂಡಳಿ ಉಪ ನಿರ್ದೇಶಕ ವಾಸುದೇವ ಕಾಮತ್ ಮಾತನಾಡಿ, ಬೋಸ್ಕೋಸ್ ಸಂಸ್ಥೆಯ ಹಿಂದಿನ ಶಕ್ತಿ ಬೋಸ್ಕೋ ಅವರು ಗಣಿತ ಪ್ರೊಫೆಸರರಾಗಿ ವಿದ್ಯಾರ್ಥಿ ಸ್ನೇಹಿಯಾಗಿದ್ದರು. ಅವರ ಪುಸ್ತಕಗಳು ಕೂಡ ಅಷ್ಟೇ ಜನಪ್ರಿಯವಾಗಿದ್ದವು. ಆದ್ದರಿಂದಲೇ ಅವರು ಹಾಗೂ ಅವರ ಸಂಸ್ಥೆಯು ಸಮಾಜಕ್ಕೆ ಒಂದು ದೊಡ್ಡ ಆಸ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬೋಸ್ಕೋಸ್ ಎಜುಕೇಶನ್ ಟ್ರಸ್ಟ್ ಎಕ್ಸಿಕ್ಯೂಟಿವ್ ಟ್ರಸ್ಟಿ ಪ್ರೊ.ಎಸ್.ಎಸ್.ಬೋಸ್ಕೋ ಮಾತನಾಡಿ, ಮಂಗಳೂರು ಮಹಾನಗರ ವ್ಯಾಪ್ತಿಯಲ್ಲೇ ಸಂಸ್ಥೆಗೆ ಸುಸಜ್ಜಿತ, ವಿದ್ಯಾರ್ಥಿ ಸ್ನೇಹಿ ಕ್ಯಾಂಪಸ್ ನಿರ್ಮಿಸುವ ಉದ್ದೇಶ ಹರಿಪದವಿನಲ್ಲಿ ಸಾಕಾರಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನೂತನ ಕ್ಯಾಂಪಸ್‌ನಲ್ಲಿ ಡಿಜಿಟಲ್ ಇ-ಲರ್ನಿಂಗ್ ಸೌಲಭ್ಯ ಒಳಗೊಂಡಿರುವ ಸುಸಜ್ಜಿತ ತರಗತಿ ಕೊಠಡಿ, ಪ್ರಯೋಗಶಾಲೆ, ಗ್ರಂಥಾಲಯ, ಆಪ್ತ ಸಮಾಲೋಚನೆ ವಿಭಾಗ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್, ಆಟದ ಮೈದಾನ, ಕಲಿಕೆಗೆ ಪೂರಕ ವಾತಾವರಣವನ್ನು ಕ್ಯಾಂಪಸ್ ಹೊಂದಿದೆ ಎನ್ನುವುದು ನಮ್ಮ ಸಂತೋಷ ಹೆಚ್ಚಿಸಿದ ಸಂಗತಿ ಎಂದರು.

ಸಂತ ಅಲೋಶಿಯಸ್‌ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸುದೀರ್ಘ 35 ವರ್ಷಗಳ ಅನುಭವ, ಬಳಿಕ 2016 ರಲ್ಲಿ ಬೋಸ್ಕೋಸ್ ಪಿಯು ಕಾಲೇಜು  ಸ್ಥಾಪನೆ, ಪಿಯು ಫಲಿತಾಂಶ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಅವರು ಸ್ಮರಿಸಿಕೊಂಡರು.

ಬೋಸ್ಕೋಸ್ ಎಜುಕೇಶನ್ ಟ್ರಸ್ಟ್ ಎಕ್ಸಿಕ್ಯೂಟಿವ್ ಟ್ರಸ್ಟಿ ಪ್ರೊ.ಎಸ್.ಎಸ್.ಬೋಸ್ಕೋ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ವ್ಯವಸ್ಥೆಯ ಭಾಗವಾಗಿ ರೀನು ಎಸ್.ಜೆ.ಫೆರ್ನಾಂಡೊ ಮಾತನಾಡಿದರು.

ಟ್ರಸ್ಟ್‌ನ ಚೇರ್‌ಪರ್ಸನ್ ಇಜಿತಿನ್ ಬೋಸ್ಕೊ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಪ್ರದೀಪ್ ಕುಮಾರ್ ಸ್ವಾಗತಿಸಿದರು. ಸುಧೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News