1.75 ಕೋ.ಭಾರತೀಯರು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ವಲಸಿಗ ಗುಂಪು: ವಿಶ್ವಸಂಸ್ಥೆ

Update: 2019-11-28 17:34 GMT

ವಿಶ್ವಸಂಸ್ಥೆ, ನ.28: ವಿಶ್ವಾದ್ಯಂತ 17.5 ಮಿಲಿಯನ್ ಭಾರತೀಯ ವಲಸಿಗರು ವಾಸವಾಗಿದ್ದು,ಅತ್ಯಂತ ಹೆಚ್ಚಿನ ಸಂಖ್ಯೆಯ ವಲಸಿಗರ ಮೂಲ ರಾಷ್ಟ್ರವಾಗಿ ಭಾರತದ ಸ್ಥಾನವು ಮುಂದುವರಿದಿದೆ ಮತ್ತು ಅದು ವಿದೇಶಗಳಲ್ಲಿ ವಾಸವಾಗಿರುವ ಭಾರತೀಯರಿಂದ 78.6 ಶತಕೋಟಿ ಅಮೆರಿಕ್ ಡಾಲರ್‌ಗಳನ್ನು ಸ್ವೀಕರಿಸಿದ್ದು,ಇಂತಹ ಹಣ ಸ್ವೀಕಾರದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆಯ ಘಟಕವಾಗಿರುವ ಇಂಟರ್‌ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್ (ಐಒಎಂ) ತನ್ನ ಜಾಗತಿಕ ವಲಸೆ ವರದಿ 2020ರಲ್ಲಿ ಹೇಳಿದೆ.

2019ರಲ್ಲಿ ಅಂತರರಾಷ್ಟ್ರೀಯ ವಲಸಿಗರ ಸಂಖ್ಯೆಯನ್ನು ಈಗ 270 ಮಿ.ಎಂದು ಅಂದಾಜಿಸಲಾಗಿದ್ದು,ಅಮೆರಿಕ ವಲಸಿಗರ ಅತ್ಯಂತ ನೆಚ್ಚಿನ ರಾಷ್ಟ್ರವಾಗಿದೆ. ಅಲ್ಲಿ ಸುಮಾರು 51 ಮಿ.ವಲಸಿಗರು ವಾಸವಾಗಿದ್ದಾರೆ ಎಂದು ಐಒಎಂ ತಿಳಿಸಿದೆ.

ಎರಡು ವರ್ಷಗಳ ಹಿಂದೆ ಪ್ರಕಟಿಸಲಾಗಿದ್ದ ಹಿಂದಿನ ವರದಿಯಲ್ಲಿನ ಸಂಖ್ಯೆಗೆ ಹೋಲಿಸಿದರೆ ಈಗ ಅಂತರರಾಷ್ಟ್ರೀಯ ವಲಸಿಗರ ಸಂಖ್ಯೆಯಲ್ಲಿ ಶೇ.0.1ರಷ್ಟು ಏರಿಕೆಯಾಗಿದೆಯಾದರೂ ಒಟ್ಟಾರೆ ಸಂಖ್ಯೆಯು ವಿಶ್ವದ ಜನಸಂಖ್ಯೆಯ ಕೇವಲ ಶೇ.3.5ರಷ್ಟನ್ನು ಪ್ರತಿನಿಧಿಸುತ್ತಿದೆ. ಒಟ್ಟು ಅಂತರರಾಷ್ಟ್ರಿಯ ವಲಸಿಗರ ಪೈಕಿ ಅರ್ಧಕ್ಕೂ ಹೆಚ್ಚು (141 ಮಿ.) ಜನರು ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ವಾಸವಾಗಿದ್ದಾರೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News