ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಹ್ಯಾಮ್ ಒಡಂಬಡಿಕೆ

Update: 2019-11-28 17:48 GMT

ಮೂಡುಬಿದಿರೆ: ಹ್ಯಾಮ್ ಅಮೆಚೂರ್ ರೇಡಿಯೋ ಮತ್ತು ನಿಯಂತ್ರಣ ಇಂಡಿಯನ್ (ಹ್ಯಾಮ್ಸ್) ಬೆಂಗಳೂರು ಮತ್ತು ಟಿ.ಇ.ಟಿ.ಇ  ವಿದ್ಯಾರ್ಥಿ ಫೋರಮ್ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ ಮೂರು ದಿನಗಳ 3 ದಿನಗಳ ಕಾರ್ಯಗಾರ ನಡೆಯಿತು. 

ವಿದ್ಯಾರ್ಥಿಗಳಿಂದಲೇ ಹ್ಯಾಮ್ಸ್ ರೆಡಿಯೋ ಅಧ್ಯಯನ, ನಿಯಂತ್ರಣ, ಕಾರ್ಯಾಗಾರ, ಸೆಮಿನಾರ್ ಮೂಲಕ ಹ್ಯಾಮ್ಸ್ ಮಾಹಿತಿ , ಲೈಸನ್ಸ್ ಹೊಂದುವ ವಿಚಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಿಕೆ ಸಹಿತ ಹಲವು ಮಹತ್ವದ ವಿಚಾರಗಳು ಸಂಬಂಧಪಟ್ಟಂತೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಹ್ಯಾಮ್ಸ್ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. 

ಹ್ಯಾಮ್ ರೇಡಿಯೋ ನಿರ್ದೇಶಕ ಡಾ. ಸತ್ಯಪಾಲ್ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಕ್ಷಿಣ ಕನ್ನಡದಲ್ಲೇ ಮೊದಲನೇ ಬಾರಿ ಹ್ಯಾಮ್ ರೇಡಿಯೋ ಸ್ಟೇಶನ್ 2020ರೊಳಗೆ
ಸೆಟ್‍ಅಪ್ ಅಗಲಿದೆ. ಲೈಸನ್ ಹೊಂದಿದವರಿಗೆ ಅತಿ ಹೆಚ್ಚು ಮನ್ನಣೆ ಸಿಗುವುದರೊಂದಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಡೀನ್‍ಗಳಾದ ಪ್ರವೀಣ್ ಜೆ, ದತ್ತಾತ್ರೇಯ, ವಿಭಾಗದ ಮುಖ್ಯಸ್ಥ ಮಂಜುನಾಥ್, ಸಂಯೋಜಕ ಪ್ರಾಧ್ಯಾಪಕ ಸಂತೋಷ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News