ಡೈಮಂಡ್ ಸ್ಕೂಲ್‍ : ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ

Update: 2019-11-28 18:00 GMT

ಬಂಟ್ವಾಳ, ನ. 28: ತಲಪಾಡಿ ಡೈಮಂಡ್ ಇಂಟರ್‍ನ್ಯಾಷನಲ್ ಸ್ಕೂಲ್‍ನ ವಿದ್ಯಾರ್ಥಿಗಳು ಶಾಲಾ ಪಠ್ಯೇತರ ಚಟುವಟಿಕೆ ಭಾಗವಾಗಿ ಗುರುವಾರ ಬಂಟ್ವಾಳದ ಲಯನ್ಸ್ ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದರು.

ಡೈಮಂಡ್ ಸ್ಕೂಲ್‍ನ ವಿದ್ಯಾರ್ಥಿಗಳು ವಿಶೇಷ ಚೇತನ ಮಕ್ಕಳೊಂದಿಗೆ ಆಟ, ಚಿತ್ರ ರಚನೆ, ನೃತ್ಯ ಹಾಗೂ ಸಂವಾದ ಮಾಡುವ ಮೂಲಕ ಅವರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು. ಅದಲ್ಲದೆ, ಸಂಸ್ಥೆಯ ವತಿಯಿಂದ ವಿಶೇಷ ಮಕ್ಕಳಿಗೆ ಉಡುಗೊರೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್, ಅಧ್ಯಕ್ಷ ಶ್ರೀನಿವಾಸ್ ಪೂಜಾರಿ, ಖಜಾಂಚಿ ದೇವಿಕಾ ದಾಮೋದರ್, ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ, ಉಪಾಧ್ಯಕ್ಷ ಕೃಷ್ಣಶಾಮ್, ಮುಹಮ್ಮದ್ ಬಾವಾ, ಗಿರೀಶ್ ಕಾಮತ್, ಕವಿತಾ ಸಲ್ಯಾನ್, ರಮ್ಜಿಯಾ, ಆಶಿಕ್ ಹಾಜರಿದ್ದರು. ಸಂಸ್ಥೆಯ ಟ್ರಸ್ಟಿ ಸನಾ ಅಲ್ತಾಫ್ ಸ್ವಾಗತಿಸಿ, ವಂದಿಸಿದರು.

ಡೈಮಂಡ್ ಸ್ಕೂಲ್‍ನ ಈ ಚಟುವಟಿಕಾ ಕಾರ್ಯಕ್ಕೆ ಲಯನ್ಸ್ ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರದ ಸಂಚಾಲಕ ದಾಮೋದರ ಬಿ.ಎಂ. ಅವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News