ಕುಪ್ಪೆಪದವು ಗಲ್ಫ್ ಗೈಸ್ ನಿಂದ ಮನೆ ಕೊಡುಗೆ

Update: 2019-11-28 18:21 GMT

ಬಜ್ಪೆ :  ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತೀರಾ ಬಡತನದಿಂದ ಸಂಕಷ್ಟದಲ್ಲಿದ್ದ ಇಲ್ಲಿನ ಕಿಲೆಂಜಾರು ಕಾಪಿಕಾಡಿನ ಇಮ್ರಾನ್ ಎಂಬವರಿಗೆ ಕುಪ್ಪೆಪದವಿನ ಗಲ್ಫ್ ಗೈಸ್ ಸಂಘಟನೆ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.

ಇಮ್ರಾನ್ ಅವರು ಅನಾರೋಗ್ಯ ಪೀಡಿತರಾಗಿ ಅಂಗವಿಕಲತೆಯಿಂದ ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಅವರ ಮೂವರು ಮಕ್ಕಳಲ್ಲಿ ಓರ್ವ ಮಗ ಕೂಡ ಅಂಗವಿಕಲತೆಯಿಂದ ಹಾಸಿಗೆ ಹಿಡಿದಿದ್ದಾನೆ. ಕಾಪಿಕಾಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ  ಇಮ್ರಾನ್ ಅವರ ಪತ್ನಿ ಮನೆ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದಾರೆ. ಇವರ ದಯನೀಯ ಪರಿಸ್ಥಿತಿಯನ್ನು ಗಮನಿಸಿದ ಕುಪ್ಪೆಪದವಿನ  ಗಲ್ಫ್ ಗೈಸ್ ಸಂಘಟನೆ ಕೆಂಪುಗುಡ್ಡೆಯಲ್ಲಿದ್ದ ಸರಕಾರಿ ಜಾಗವನ್ನು, ಗ್ರಾಮ ಪಂಚಾಯತ್ ನಿಂದ ಪಡೆದುಕೊಂಡು, ದಾನಿಗಳು ಮತ್ತು ಸಂಘಟನೆ ಸದಸ್ಯರ ಸಹಕಾರದಿಂದ ಅಂದಾಜು 4.70 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ. ಸಂಘಟನೆಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News