×
Ad

ಡಿ.1ರಿಂದ ಕಿರುತೆರೆಯಲ್ಲಿ ‘ತುಳುನಾಡ ಬಂಗಾರ್ ಗರೊಡಿಲು’ ಪ್ರದರ್ಶನ

Update: 2019-11-29 20:12 IST

ಮಂಗಳೂರು, ನ.29: ಡಿ.ಸ್ವಸ್ತಿಕ್ ಪ್ರೊಡಕ್ಷನ್ ಅರ್ಪಿಸುವ ಮುದ್ರಾಡಿ ಸುರೇಂದ್ರ ಮೋಹನ್ ಸಾರಥ್ಯದಲ್ಲಿ ‘ತುಳುನಾಡ ಬಂಗಾರ್ ಗರೊಡಿಲು’ (ಕೋಟಿ ಚೆನ್ನಯರ ಗರೋಡಿ ಕ್ಷೇತ್ರ ದರ್ಶನ ಮತ್ತು ಪರಿಚಯ) ಕನ್ನಡ/ ತುಳು ಸಾಕ್ಷಚಿತ್ರ ಕಿರುತೆರೆಯಲ್ಲಿ ಪ್ರದರ್ಶನವು ಡಿ.1ರಿಂದ ‘ನಮ್ಮ ಕುಡ್ಲ ಚಾನೆಲ್’ನಲ್ಲಿ ಪ್ರತೀ ರವಿವಾರ ಪೂ.11:30ರಿಂದ 12 ಗಂಟೆಯ ತನಕ ಮತ್ತು ಅದರ ಮರುಪ್ರಸಾರ ಪ್ರತಿ ಗುರುವಾರ ರಾತ್ರಿ 9:30 ರಿಂದ 10ರ ತನಕ ನಡೆಯಲಿದೆ ಎಂದು ತಂಡದ ಮಾರ್ಗದರ್ಶಕ ಬನ್ನಂಜೆ ಬಾಬು ಅಮೀನ್ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರನ್ನು ಆರಾಧಿಸುವಂತಹ ದ.ಕ., ಕಾಸರಗೋಡು, ಕುಂದಾಪುರ, ಮಡಿಕೇರಿ, ಮುಂಬಯಿ ಸಹಿತ ನಾನಾ ಕಡೆ ಇರುವ 242 ಗರೋಡಿಗಳ ಚರಿತ್ರೆಯನ್ನು ವಿಮರ್ಶಿಸಿ ಅಲ್ಲಿನ ಇತಿಹಾಸವನ್ನು ನಿರೂಪಕರ ಮೂಲಕ ಹೇಳಿಸುವ ರೀತಿ ಈ ಸಾಕ್ಷಚಿತ್ರ ನಿರ್ಮಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಉಡುಪಿ ಜಿಲ್ಲೆಯ ಮಠ ಮಂದಿರ ಸಂಪರ್ಕ ಪ್ರಮುಖ್ ರಮೇಶ್ ಕಲ್ಲೊಟ್ಟೆ ಹೇಳಿದರು.

100ಕ್ಕೂ ಅಧಿಕ ಕಂತುಗಳಲ್ಲಿ ಸಾಕ್ಷಚಿತ್ರ ಪ್ರಸಾರವಾಗಲಿದೆ. ಅರೆ ಭಾಷೆಯ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸುಧೀೀರ್ ಏನೆಕಲ್ ಸಾಹಿತ್ಯ ಒದಗಿಸಿದ್ದಾರೆ. ವಿದ್ಯಾರ್ಥಿನಿಯರಾದ ದೀಪಿಕಾ ಶೆಟ್ಟಿ ಹೆಬ್ರಿ, ರಕ್ಷಾ ಕೋಟ್ಯಾನ್ ವೇಣೂರು, ಸುರಕ್ಷಾ ಆಚಾರ್ಯ ನೆಲ್ಲಿಕಾರು, ಪ್ರಜ್ಞಾ ಪೂಜಾರಿ ಮೂಡುಬಿದಿರೆ ಮತ್ತು ಸೌಮ್ಯಾ ಮೂಡುಬೆಳ್ಳೆ ನಿರೂಪಕಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಮುದ್ರಾಡಿ ಸುರೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತುಳು ವರ್ಲ್ಡ್ ಅಧ್ಯಕ್ಷ ರಾಜೇಶ್ ಆಳ್ವ, ಶರತ್ ಅಮೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News