×
Ad

ಉಡುಪಿ ಜಿಲ್ಲಾ ನಾಗರಿಕ ಸಮಿತಿಗೆ ವಿಶಂತಿ ಸಂಭ್ರಮ

Update: 2019-11-29 21:27 IST

ಉಡುಪಿ, ನ.29: ನಗರದ ಸಮಾಜಸೇವಾ ಸಂಸ್ಥೆಯಾದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇದೀಗ ಸ್ಥಾಪನೆಯ 20ನೇ ವರ್ಷದ ಸಂಭ್ರಮವನ್ನು ಆಚರಿಸುತಿದ್ದು, ‘ವಿಂಶತಿ ಸಂಭ್ರಮ-2019’ ಕಾರ್ಯಕ್ರಮವನ್ನು ಇದೇ ಡಿ.1ರಂದು ಹೊಟೇಲ್ ಸ್ವದೇಶ್ ಹೆರಿಟೇಜ್‌ನ ಮೂರನೇ ಮಹಡಿಯ ‘ಸ್ವರ್ಗ’ ಸಭಾಂಗಣದಲ್ಲಿ ಹಮ್ಮಿಕೊಂಡಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ಶ್ರೀನಾಗೇಶ್ ಹೆಗ್ಡೆ ತಿಳಿಸಿದ್ದಾರೆ.

ಕಾರ್ಯಕ್ರಮ ಡಿ.1ರ ರವಿವಾರ ಬೆಳಗ್ಗೆ 10:30ಕ್ಕೆ ಶ್ರೀನಾಗೇಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ವೇಳೆ ತಾರಾನಾಥ ಮೇಸ್ತ ಶಿರೂರು ಬರೆದಿರುವ ‘ಆಪದ್ಭಾಂಧವ’ ಕೃತಿಯ ಬಿಡುಗಡೆಯೂ ನಡೆಯಲಿದೆ. ಕಾರ್ಯಕ್ರಮವನ್ನು ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸಲಿದ್ದಾರೆ. ಮೂಡಬಿದರೆಯ ಡಾ.ಮೋಹನ ಆಳ್ವ ಕೃತಿ ಬಿಡುಗಡೆ ಮಾಡಲಿದ್ದಾರೆ. ಪತ್ರಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಕೃತಿ ಪರಿಚಯ ಮಾಡಲಿದ್ದಾರೆ ಎಂದು ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀನಾಗೇಶ್ ಹೆಗ್ಡೆ ತಿಳಿಸಿದರು.

ಸಂಸ್ಥೆಯ ವೆಬ್‌ಸೈಟ್‌ನ್ನು ಉಡುಪಿಯ ಉಪಪೊಲೀಸ್ ವರಿಷ್ಠಾಧಿಕಾರಿ ಜೈಶಂಕರ್ ಲೋಕಾರ್ಪಣೆಗೊಳಿಸಲಿದ್ದಾರೆ. ವಿಂಶತಿ ವರ್ಷದ ಲಾಂಛನವನ್ನು ಹಿರಿಯ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಅನಾವರಣಗೊಳಿಸಲಿದ್ದಾರೆ. ಮಂಗಳೂರಿನ ಎ.ಕೆ.ಕುಕ್ಕಿಲ ಶುಭಾಶಂಸನೆ ಮಾಡಲಿದ್ದಾರೆ.

ಕೊನೆಯಲ್ಲಿ ನೃತ್ಯನಿಕೇತನ ಕೊಡವೂರು ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ, ಕೆ.ಬಾಲಗಂಗಾಧರ್ ರಾವ್, ಬಿ.ಅಶೋಕ್ ಪೈ ಹಾಗೂ ಮಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News