‘ಎಲ್ಲಾ ಮಾಧ್ಯಮಗಳು ಪಕ್ಷಪಾತದಿಂದ ಕೂಡಿವೆ’ಎನ್ನುವ ಟೀಕೆಗಳು ಉತ್ಪ್ರೇಕ್ಷೆಯಿಂದ ಕೂಡಿದೆ: ಬರ್ಕಾದತ್ತ್
ಮಂಗಳೂರು, ನ. 29: ‘ಎಲ್ಲಾ ಮಾಧ್ಯಮಗಳು ಪಕ್ಷಪಾತದಿಂದ ಕೂಡಿವೆ’ಎನ್ನುವ ಟೀಕೆ ಗಳು ಉತ್ಪ್ರೇಕ್ಷೆಯಿಂದ ಕೂಡಿದೆ ಎಂದು ಖ್ಯಾತ ಪತ್ರಕರ್ತೆ ಬರ್ಕಾದತ್ತ್ ತಿಳಿಸಿದ್ದಾರೆ.
ನಗರದ ಮಂಗಳೂರಿನ ಡಾ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಮಂಗಳೂರು ಲಿಟ್ ಫೆಸ್ಟ್ ಸಂವಾದ ಗೋಷ್ಠಿಯಲ್ಲಿ ಭಾರತೀಯ ಮಾಧ್ಯಮವು ತನ್ನ ಪಕ್ಷಪಾತವನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಕುರಿತ ಮಾತನಾಡುತ್ತಿದ್ದರು.
ಬರ್ಖಾದತ್ ತನ್ನ ಪ್ರತಿಕ್ರಿಯೆಯಲ್ಲಿ, ಮಾಧ್ಯಮದಲ್ಲಿ ನಿಯಂತ್ರಣದ ಹೇಗೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿದರು. ಬರ್ಖಾ ಅವರ ಪ್ರಕಾರ ಮಾಧ್ಯಮಗಳಲ್ಲಿನ ದಬ್ಬಾಳಿಕೆಯು ‘‘ ಪ್ರಭುತ್ವದ ಮೂಲಕ ಮಾಧ್ಯಮದಲ್ಲಿ ನಿಯಂತ್ರಣದ ದಬ್ಬಾಳಿಕೆ ಒಂದು ಕಡೆ ಆದರೆ ಖಾಸಗಿ ಮಾಧ್ಯಮಗಳಲ್ಲಿ ಮಾರುಕಟ್ಟೆಯ ದಬ್ಬಾಳಿಕೆ ಮತ್ತು ವೆಬ್ ಪೋರ್ಟಲ್‌ಗಳಲ್ಲಿನ ಇನ್ನೊಂದು ರೀತಿಯ ದಬ್ಬಾಳಿಕೆ, ಈ ದಬ್ಬಾಳಿಕೆಯ ಮಧ್ಯೆ ಅಪ್ಪಚ್ಚಿಯಾದ ವ್ಯಕ್ತಿಯು ವರದಿಗಾರ’’ ಎಂದು ಮಾಧ್ಯಮ ಪ್ರತಿನಿಧಿಗಳ ಸಂದಿಗ್ದತೆಯನ್ನು ವಿವರಿಸಿದರು.
ಮಾಧ್ಯಮ ಪಕ್ಷಪಾತದ ಬಗ್ಗೆ ಬರ್ಖಾ ಅವರು ವಾದಿಸಿಸುತ್ತಾ ಜನರು ತಾವು ಈಗಾಗಲೇ ನಂಬಿರುವ ವಿಷಯದ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ಸ್ವೀಕರಿಸುವುದಿಲ್ಲ ಎಂದು ಅವರು ತಮ್ಮ ಸ್ವ ಅನುಭವವನ್ನು ತಿಳಿಸಿದರು. ಎಲ್ಲಾ ಸಿದ್ಧಾಂತ ಗಳನ್ನು ಒರೆಗೆ ಹಚ್ಚುವುದು ಒಳ್ಳೆಯದು. ಆಗ ಮಾಧ್ಯಮಗಳನ್ನು ಪಕ್ಷಪಾತ ಮಾಡುತ್ತಿವೆ ಎಂದು ನಿರಂತರವಾಗಿ ಲೇಬಲ್ ಮಾಡುವುದು ಉತ್ಪ್ರೇಕ್ಷೆಯಾಗಿದೆ ಎಂದು ಅವರು ಹೇಳಿದರು.
ಎಎನ್‌ಐನ ಮುಖ್ಯ ಸಂಪಾದಕ ಸ್ಮಿತಾ ಪ್ರಕಾಶ್ ಅವರು ಮಾಧ್ಯಮವನ್ನು ಏಕರೂಪಗೊಳಿಸುವುದು ಸರಿಯಲ್ಲ. ಪ್ರಾದೇಶಿಕ ಮಾಧ್ಯಮಗಳು, ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ರಾಷ್ಟ್ರೀಯ ಮಾಧ್ಯಮಗಳಿವೆ. ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಕೆಲವು ನೀತಿಗಳನ್ನು ಪಾಲಿಸುತ್ತಾರೆ ಮತ್ತು ಅನುಸರಿಸುತ್ತಾರೆ ಎಂದು ಸ್ಮಿತಾ ತಿಳಿಸಿದರು.
ದೂರದರ್ಶನವನ್ನು ಮಾದ್ಯಮ ಕುಟುಂಬದ ಮುಖ್ಯಸ್ಥರೊಂದಿಗೆ ಹೋಲಿಸಿ, ಪ್ರಸ್ತುತ ಕಾಲದಲ್ಲಿ, ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ, ಜನರು ಒಂದು ಮಾಧ್ಯಮ ಮನೆಯನ್ನು ಅನುಸರಿಸಬೇಕಾಗಿಲ್ಲ, ಬದಲಿಗೆ ಅವರು ಹಲವಾರು ಮಾಧ್ಯಮ ಮೂಲಗಳನ್ನು ಅನ್ವೇಷಿಸಬಹುದು ಮತ್ತು ಅವಲಂಬಿಸಬಹುದು. ಮತ್ತಷ್ಟು ನೀವು ನಂಬಲು ಬಯಸುವದನ್ನು ನಂಬಿರಿ ಮತ್ತು ಬುದ್ಧಿವಂತ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ ಎಂದರು.