ಕಾರ್ಪೊರೇಟ್ ತೆರಿಗೆ ಕಡಿತದಿಂದ ಹೂಡಿಕೆಗೆ ಉತ್ತೇಜನ: ಕೆವಿ ಸುಬ್ರಮಣಿಯನ್

Update: 2019-11-29 17:04 GMT
PTI

 ಹೊಸದಿಲ್ಲಿ, ನ.29: ಹೂಡಿಕೆಗೆ ಉತ್ತೇಜನ ನೀಡುವ ಪ್ರಯತ್ನವಾಗಿ ಸರಕಾರ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಮಣಿಯನ್ ಹೇಳಿದ್ದಾರೆ.

ಕಾರ್ಪೊರೇಟ್ ತೆರಿಗೆ ಕಡಿತ, ಕಾರ್ಮಿಕ ಸುಧಾರಣೆಗಳು, ಸಾಲ ಬಂಡವಾಳ ಮತ್ತು ಕ್ರೆಡಿಟ್ ಮಾರ್ಕೆಟ್‌ಗಳು ಹೂಡಿಕೆಗೆ ಪ್ರಚೋದನೆ ನೀಡಲು ಅಗತ್ಯವಿರುವ ಕ್ರಮವಾಗಿದೆ. ಕಳೆದ ಕೆಲವು ತ್ರೈಮಾಸಿಕ ಅವಧಿಯ ಆರ್ಥಿಕ ಪ್ರಗತಿ ಈ ಹಿಂದಿನಂತಿರಲಿಲ್ಲ. ಈಗಿರುವ ಪರಿಸ್ಥಿತಿ ಪ್ರಮುಖ ರಚನಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಅವಕಾಶ ಒದಗಿಸಿದೆ ಎಂದವರು ಹೇಳಿದ್ದಾರೆ.

ಇತರ ಯಾವುದೇ ಪ್ರೋತ್ಸಾಹಕ ಕ್ರಮಗಳನ್ನು ಬಳಸಿಕೊಳ್ಳದ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ 35%ದಿಂದ 22%ಕ್ಕೆ ಇಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News