'ಆಕೆ ಸಹೋದರಿಗೆ ಕರೆ ಮಾಡಿದ್ದಳೇ ಹೊರತು ಪೊಲೀಸರಿಗಲ್ಲ': ವೈದ್ಯೆಯ ಬಗ್ಗೆ ಗೃಹಸಚಿವರ ಹೇಳಿಕೆ!
Update: 2019-11-29 22:46 IST
ಹೈದರಾಬಾದ್, ನ.29: ತನ್ನ ಸುತ್ತಲಿದ್ದವರು ಅನುಮಾನಾಸ್ಪದವಾಗಿ ವರ್ತಿಸುವುದನ್ನು ಕಂಡಾಗ ತೆಲಂಗಾಣದ ವೈದ್ಯೆ ಸಹೋದರಿಯ ಬದಲು ಪೊಲೀಸರಿಗೆ ಕರೆ ಮಾಡಿದ್ದ ಈ ಘಟನೆಯನ್ನು ತಡೆಯಬಹುದಿತ್ತು ಎಂದು ತೆಲಂಗಾಣದ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.
"ಘಟನೆಯಿಂದ ನಮಗೆ ನೋವಾಗಿದೆ. ಪೊಲೀಸರು ಎಚ್ಚರವಾಗಿದ್ದಾರೆ ಮತ್ತು ಅಪರಾಧಗಳನ್ನು ತಡೆಯುತ್ತಿದ್ದಾರೆ. ಆಕೆ ವಿದ್ಯಾವಂತೆಯಾಗಿದ್ದರೂ ಪೊಲೀಸರ ಬದಲು ಸಹೋದರಿಗೆ ಕರೆ ಮಾಡಿದ್ದಾಳೆ. 100 ನಂಬರ್ ಗೆ ಕರೆ ಮಾಡಿದ್ದರೆ ಆಕೆಯನ್ನು ರಕ್ಷಿಸಬಹುದಿತ್ತು" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ತೆಲಂಗಾಣ ಗೃಹ ಸಚಿವ ಮಹ್ಮೂದ್ ಅಲಿ ಹೇಳಿಕೆ ನೀಡಿದ್ದಾರೆ.