22,000 ಕೋಟಿ ರೂಪಾಯಿ ಸೇನಾ ಯೋಜನೆ ಒಪ್ಪಂದಕ್ಕೆ ಕೇಂದ್ರ ಸರಕಾರ ಒಪ್ಪಿಗೆ

Update: 2019-11-29 17:16 GMT
PTI

 ಹೊಸದಿಲ್ಲಿ, ನ. 29: ತನ್ನ ಸೇನಾ ಸಾಮರ್ಥ್ಯ ವರ್ಧಿಸಲು 22,800 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ವ್ಯವಸ್ಥೆ ಖರೀದಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

 ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಬೆಂಬಲಿಸಲು ಅಸಾಲ್ಟ್ ರೈಫಲ್‌ಗೆ ಥರ್ಮಲ್ ಇಮೇಜಿಂಗ್ ನೈಟ್ ಸೈಟ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ಹಾಗೂ ಉತ್ಪಾದಿಸಲು ರಕ್ಷಣಾ ಸಚಿವಾಲಯದ ಉನ್ನತ ಖರೀದಿ ಘಟಕ ರಕ್ಷಣಾ ಖರೀದಿ ಮಂಡಳಿ ಹಸಿರು ನಿಶಾನೆ ತೋರಿಸಿದೆ.

‘‘ಈ ಸೈಟ್‌ಗಳನ್ನು ದೇಶದ ಖಾಸಗಿ ಕೈಗಾರಿಕೆ ಉತ್ಪಾದಿಸಲಿದೆ. ಮುಂಚೂಣಿಯಲ್ಲಿ ನಿಯೋಜಿತವಾಗುವ ಪಡೆಗಳು ಇದನ್ನು ಬಳಸಲಿದೆ. ಇದರಿಂದ ಕತ್ತಲೆಯಲ್ಲಿ ನಿಖರ ಗುರಿಯನ್ನು ಹೊಡೆದುರುಳಿಸಲು ಸೇನಾ ಪಡೆಗೆ ಸಾಧ್ಯವಾಗಲಿದೆ. ಅಲ್ಲದೆ, ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿ ಕೂಡ ಸೇನಾಪಡೆಯ ರಾತ್ರಿ ಹೋರಾಟ ಸಾಮರ್ಥ್ಯವನ್ನು ಹೆಚ್ಚಿಸಲಿದೆ’’ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News