ಅಂತರ್ ಜಿಲ್ಲಾ ಈಜು ಸ್ಪರ್ಧೆ : ಜೈ ಹಿಂದ್ ಈಜು ಕ್ಲಬ್‌ ಗೆ ಹಲವು ಪದಕ

Update: 2019-11-29 17:17 GMT

ಕಾರ್ಕಳ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ವತಿಯಿಂದ ಅಂತರ್ ಜಿಲ್ಲಾ ಈಜು ಸ್ಪರ್ಧೆ ಕಾರ್ಕಳದಲ್ಲಿ ನಡೆಯಿತು.

ಜೈ ಹಿಂದ್ ಈಜು ಕ್ಲಬ್‌ನ ಸದಸ್ಯರು 21 ಚಿನ್ನ, 10 ಬೆಳ್ಳಿ ಮತ್ತು 13 ಕಂಚು ಸೇರಿ 44 ಪದಕಗಳನ್ನು ಪಡೆದುಕೊಂಡರು. ಅವರು ಮುಖ್ಯ ತರಬೇತುದಾರರಾದ  ವಿ ರಾಮಕೃಷ್ಣ ರಾವ್, ಮುಖ್ಯ ಕೋಚ್  ರಾಜೇಶ್ ಆ್ಯಂಟನಿ ಬೆಂಗ್ರೆ, ಸಹಾಯಕ ಕೋಚ್ ರಜತ್ ರಾವ್, ಶರತ್ ಕುಮಾರ್ ಅವರ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News