ಮದೀನಾ: ಸ್ನೇಹ ತೀರ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮ

Update: 2019-11-30 05:50 GMT

 ಮದೀನಾ : ಮಜ್ಲಿಸ್ ಶಿಫಾಅ್ ಅಸ್ಸಖಾಫತಿಲ್ ಇಸ್ಲಾಮಿಯ್ಯ ಆದೂರ್ ಮದೀನಾ ಮುನವ್ವರ ‌ಘಟಕ ವತಿಯಿಂದ ಸ್ನೇಹ ತೀರಮ್ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮವು ಶುಕ್ರವಾರ ಮದೀನಾ ಮುನವ್ವರದಲ್ಲಿ  ನಡೆಯಿತು. 

ಕಾರ್ಯಕ್ರಮವನ್ನು ದಾರುಲ್ ಇರ್ಷಾದ್ ಎಜುಕೇಶನ್ ಅಕಾಡಮಿ ಮದೀನಾ ಮುನವ್ವರ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು ಉದ್ಘಾಟಿಸಿ, ಸಯ್ಯದ್ ಕುಟುಂಬದ ಪ್ರಾಮುಖ್ಯತೆ ವಿವರಿಸಿದರು. ಮಜ್ಲಿಸ್ ಎಜು ಪಾರ್ಕ್ ಚೇರ್ಮನ್ ಸಯ್ಯದ್  ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮದನಿ ಆದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಮಾಮ್, ರಿಯಾದ್, ಜಿದ್ದಾದಲ್ಲಿ ಸ್ನೇಹ ತೀರ ಕ್ಯಾಂಪೇನ್ ಹಮ್ಮಿಕೊಂಡಿದ್ದು, ಈ ಕ್ಯಾಂಪೇನ್ ನ ಕೊನೆಯ ಭಾಗವಾಗಿ ಇಂದು ಮದೀನಾ ಮುನವ್ವರದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಜ್ಲಿಸ್  ಆದೂರು ಮದೀನಾ ಮುನವ್ವರ ‌ಘಟಕ ವತಿಯಿಂದ ತಂಙಳ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯೂಸುಫ್ ಮದನಿ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್  ಆಯೋಜಿಸಲಾಗಿತ್ತು. ಈ ವೇಳೆ ಮಜ್ಲಿಸ್ ಆದೂರು ಸೌದಿ ಅರೇಬಿಯಾ ಆರ್ಗನೈಸರ್ ಮುಹಮ್ಮದ್ ಕಮಾಲ್ ರಝ್ವಿ ಅಂಜದಿ ಸುಳ್ಯ, ಅಶ್ರಫ್ ಸಖಾಫಿ ನೂಜಿ, ಹಂಝ ಉಸ್ತಾದ್, ಅಬ್ದುಲ್ ರಹ್ಮಾನ್, ನಾಸೀರ್ ಬಾಂಬಿಲ, ಸಫ್ವಾನ್ ಅಝ್ಹರಿ, ಸರ್ಫರಾಝ್ ಕುಪ್ಪೆಪದವು, ಕಮಲ್ ಬಾಂಬಿಲ , ಶಮೀಝ್ ಕುಪ್ಪೆಪದವು, ಮುನೀರ್ ಬಾಂಬಿಲ, ತಾಜುದ್ದೀನ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News