ಬ್ಯಾಂಕಿಂಗ್ ವಂಚನೆ: 'ಏಮ್ಸ್'ನ ಎಸ್ ಬಿಐ ಖಾತೆಗಳಿಂದ 12 ಕೋಟಿ ರೂ. ಕಳವು

Update: 2019-11-30 14:48 GMT

ಹೊಸದಿಲ್ಲಿ, ನ.30: ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 2 ಖಾತೆಗಳಿಂದ 12 ಕೋಟಿ ರೂ.ಗಳನ್ನು ದೋಚಲಾಗಿದೆ ಎಂದು ವರದಿಯಾಗಿದೆ. 'ಚೆಕ್ ಕ್ಲೋನ್' (ತದ್ರೂಪಿ) ಮಾಡುವ ಮೂಲಕ ಈ ವಂಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇತರ ನಗರಗಳಲ್ಲಿರುವ ನಾನ್ ಹೋಮ್ ಶಾಖೆಗಳ ಖಾತೆಗಳಿಂದ ಹಣ ಕಳವುಗೈಯಲಾಗಿದೆ . ಈ ವಂಚನೆ ಬೆಳಕಿಗೆ ಬಂದ ನಂತರವೂ ಡೆಹ್ರಾಡೂನ್ ಮತ್ತು ಮುಂಬೈ ಶಾಖೆಗಳಲ್ಲಿ ಕ್ಲೋನ್ಡ್ ಚೆಕ್ ಗಳನ್ನು ಬಳಸಿ ಸುಮಾರು 29 ಕೋಟಿ ರೂ.ಗಳನ್ನು ಕಳವುಗೈಯಲು ಯತ್ನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಯುವಿ ರೇ ಟೆಸ್ಟ್ ಗಳಲ್ಲೂ ಈ ಚೆಕ್ ಗಳು ಪಾಸ್ ಆಗಿದ್ದವು ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಏಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ದಿಲ್ಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News