×
Ad

ಡಿ.2ರಿಂದ ಜಿಲ್ಲೆಯಾದ್ಯಂತ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ

Update: 2019-11-30 20:33 IST

ಉಡುಪಿ, ನ.30: ಪ್ರಥಮ ಸುತ್ತಿನ ತೀವ್ರತರ ಮಿಷನ್ ಇಂದ್ರಧನುಷ್ ಕಾರ್ಯಕ್ರಮವು ಡಿ.2ರಿಂದ ಡಿ.10ರವರೆಗೆ ಹಾಗೂ ಶಾಲಾ ಲಸಿಕಾ ಕಾರ್ಯ ಕ್ರಮವು ಡಿ.11ರಿಂದ ಡಿ.31ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಪ್ರಭಾರ ಆರ್‌ಸಿಎಚ್ ಅಧಿಕಾರಿ ಶ್ರೀರಾಮ್ ರಾವ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯ ಕ್ರಮದಲ್ಲಿ ಲಸಿಕಾ ವಂಚಿತ ಹಾಗೂ ಅಪೂರ್ಣ ಲಸಿಕೆ ಪಡೆದ ತಾಯಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಪ್ರಥಮ ಸುತ್ತು ಡಿ.2ರಿಂದ 10ರವರೆಗೆ ಮತ್ತು ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸುತ್ತು ಕ್ರಮವಾಗಿ ಜ.6, ಫೆ.3 ಮತ್ತು ಮಾ.2ರಂದು ನಡೆಯಲಿದೆ. ಸರಕಾರಿ ರಜಾ ದಿನ ಮತ್ತು ಸಾರ್ವತ್ರಿಕ ಲಸಿಕಾ ದಿನಗಳನ್ನು ಹೊರತುಪಡಿಸಿ ಆರು ಕರ್ತವ್ಯದ ದಿನಗಳಲ್ಲಿ ಲಸಿಕೆ ನೀಡಲಾಗು ವುದು ಎಂದರು.

ಈಗಾಗಲೇ ಮನೆ ಸಮೀಕ್ಷೆ ನಡೆಸಿ ಫಲಾನುಭವಿಗಳ ಪಟ್ಟಿ ಮಾಡಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಅದರಂತೆ 79 ಗರ್ಭಿಣಿಯರು ಮತ್ತು 0-2 ವರ್ಷದೊಳಗಿನ 336 ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಕ್ರಿಯಾಯೋಜನೆ ಯಂತೆ ಫಲಾನುಭವಿಗಳು ಇರುವಲ್ಲಿ ಶಿಬಿರಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಶಾಲಾ ಲಸಿಕಾ ಕಾರ್ಯಕ್ರಮದಲ್ಲಿ ಒಂದನೆ ತರಗತಿಯ 4710 ಮಕ್ಕಳಿಗೆ ಡಿಪಿಟಿ ಲಸಿಕೆ, ಐದನೆ ತರಗತಿಯ 4828 ಮಕ್ಕಳಿಗೆ ಟಿಡಿ ಲಸಿಕೆ, 10ನೆ ತರಗತಿಯ 4714 ಮಕ್ಕಳಿಗೆ ಟಿ.ಡಿ. ಲಸಿಕೆಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಅಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ, ಜಿಲ್ಲಾ ಏಡ್ಸ್ ನಿಯಂತ್ರಣಾ ಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ. ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News