ಕೇಂದ್ರದ ಯೋಜನೆಯಡಿ 1.29 ಲಕ್ಷ ಗ್ರಾಮಗಳಿಗೆ ಹೈ-ಸ್ಪೀಡ್ ಇಂಟರ್ನೆಟ್

Update: 2019-11-30 16:13 GMT

ಹೊಸದಿಲ್ಲಿ,ನ.30: ಭಾರತ ನೆಟ್ ದೇಶವ್ಯಾಪಿ ಡಾಟಾ ಸಂಪರ್ಕ ಯೋಜನೆಯಡಿ 1.29 ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್‌ನೊಂದಿಗೆ ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ ಅವರು ಶನಿವಾರ ತಿಳಿಸಿದ್ದಾರೆ.

ಸರಕಾರವು ಭಾರತ ನೆಟ್ ಯೋಜನೆಗೆ 20,431 ಕೋ.ರೂ.ಗಳನ್ನು ಒದಗಿಸಿದ್ದು,ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ನೊಂದಿಗೆ ದೇಶದಲ್ಲಿಯ 2.50 ಲ.ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸಲಾಗುವುದು. ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಟ್ವೀಟಿಸಿದ್ದಾರೆ.

2012ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಸರಕಾರವು ಭಾರತ ನೆಟ್ ಯೋಜನೆಗೆ ಚಾಲನೆ ನೀಡಿತ್ತು. ಆಗಿನಿಂದ ಹಲವಾರು ಗಡುವುಗಳು ವಿಫಲಗೊಂಡಿದ್ದು,ಒಂದು ಲಕ್ಷ ಗ್ರಾಮಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಮೂಲಕ 2018,ಜನವರಿಯಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News