×
Ad

ಗಂಗೊಳ್ಳಿ : ಬೈಕ್-ಟೆಂಪೊ ಢಿಕ್ಕಿ ; ಇಬ್ಬರು ಮೃತ್ಯು

Update: 2019-11-30 22:07 IST

ಗಂಗೊಳ್ಳಿ, ನ.30: ಇಲ್ಲಿಗೆ ಸಮೀಪದ ಮುಳ್ಳಿಕಟ್ಟೆ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಬೈಕ್ ಹಾಗೂ ಟೆಂಪೊ ಟ್ರಾವೆಲರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಬೈಕ್ ಸವಾರ ಗಂಗೊಳ್ಳಿ ಜಾಮಿಯಾ ಮೊಹಲ್ಲಾ ನಿವಾಸಿ ಮುಹಮ್ಮದ್ ಹುಸೈನ್ ಎಂಬವರ ಪುತ್ರ ಶಾದಾಬ್ (43) ಹಾಗೂ ಸಹಸವಾರ ಬೈಂದೂರು ಮೂಲದ ಸದ್ಯ ಗಂಗೊಳ್ಳಿ ಬಾಡಿಗೆ ಮನೆ ನಿವಾಸಿ ಅಬ್ದುರ್ರಹೀಂ (51) ಎಂದು ಗುರುತಿಸಲಾಗಿದೆ.

ಆಲೂರು ಕಡೆಯಿಂದ ಗಂಗೊಳ್ಳಿಯತ್ತ ತೆರಳಲು ರಸ್ತೆ ದಾಟುತ್ತಿದ್ದ ಬೈಕಿಗೆ ಬೈಂದೂರು ಕಡೆಯಿಂದ ಕುಂದಾಪುರದತ್ತ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ ಇದರಿಂದ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯ ಗೊಂಡಿದ್ದಾರೆ ಇವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.

ಶಾದಾಬ್ ಮೀನಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದರೆ ಅಬ್ದುರ್ರಹೀಂ ಅಡುಗೆ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬ್ದುರ್ರಹೀಂ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅಪಾಯಕಾರಿ ಜಂಕ್ಷನ್

ರಾ.ಹೆ.66ರ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಎಲ್ಲೂ ಬ್ಯಾರೀಕೆಟ್‌ಗಳನ್ನು ಅಳವಡಿಸಿಲ್ಲ. ಅದಲ್ಲದೆ ಈ ಜಂಕ್ಷನ್‌ನಲ್ಲಿ ದಾರಿದೀಪದ ವ್ಯವಸ್ಥೆಯೂ ಇಲ್ಲವಾಗಿದೆ. ಇದರಿಂದ ಈ ಸ್ಥಳದಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News