ಕೀಟನಾಶಕ ಸೇವಿಸಿ ಮೃತ್ಯು
Update: 2019-11-30 22:24 IST
ಕುಂದಾಪುರ, ನ.30: ವಿಪರೀತ ಮದ್ಯ ಸೇವಿಸುವ ಚಟವನ್ನು ಹೊಂದಿದ್ದ ಕೋಟೇಶ್ವರ ಮಾರ್ಕೋಡು ನಿವಾಸಿ ಗಣಪ ಪೂಜಾರಿ (55) ಎಂಬವರು ಮದ್ಯದ ಅಮಲಿನಲ್ಲಿ ನ.25ರಂದು ಮಧ್ಯಾಹ್ನ ಮನೆಯಲ್ಲಿದ್ದ ಕೀಟ ನಾಶಕವನ್ನು ಸೇವಿಸಿ ಅಸ್ವಸ್ಥರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ನ.30ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.