×
Ad

ಉಡುಪಿ : ತ್ಯಾಜ್ಯ ಸುರಿಯುತ್ತಿದ್ದ ವಾಹನದಿಂದ ದಂಡ ವಸೂಲಿ

Update: 2019-11-30 22:30 IST

ಉಡುಪಿ, ನ.30: ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಬೈಪಾಸ್ ಬಳಿ ಮಾರ್ಬಲ್ ಸಾಗಿಸುವ ವಾಹನದಲ್ಲಿದ್ದ ತ್ಯಾಜ್ಯವನ್ನು ಸುರಿಯುತ್ತಿರುವ ವೇಳೆ ಕಛೇರಿಯ ಆರೋಗ್ಯ ನಿರೀಕ್ಷಕರು ದಾಳಿ ನಡೆಸಿ, ಪ್ರದೇಶದಲ್ಲಿದ್ದ ತ್ಯಾಜ್ಯವನ್ನು ಮರಳಿ ವಾಹನಕ್ಕೆ ತುಂಬಿಸಿ, 2,300 ರೂ. ದಂಡ ವಸೂಲಿ ಮಾಡಿದರು.

ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಕಡೆ ಕಸ ಬಿಸಾಡುತ್ತಿರುವವರಿಂದ ಸುಮಾರು 50,000ರೂ.ನಷ್ಟು ದಂಡವನ್ನು ಸಂಗ್ರಹಿಸಲಾಗಿದ್ದು, ಇನ್ನು ಮುಂದೆ ಯಾವುದೇ ಪ್ರದೇಶದಲ್ಲಿ ತ್ಯಾಜ್ಯವನ್ನು ಸುರಿಯುವುದು ಕಂಡು ಬಂದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ 2016 ರೀತ್ಯಾ ಮೊಕದ್ದಮೆ ದಾಖಲಿಸಿ ಹೆಚ್ಚುವರಿ ದಂಡವನ್ನು ವಿಧಿಸಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News