ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2019-12-01 14:14 GMT

ಕಾಪು, ಡಿ.1: ಮೂಡುಬೆಳ್ಳೆಯ ಸಂತ ಲಾರೆನ್ಸ್ ಚರ್ಚ್ ಸೌಹಾರ್ದ ಸಭಾಂಗಣದಲ್ಲಿ ಡಿ.17ರಂದು ನಡೆಯಲಿರುವ ಕಾಪು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಂತ ಲಾರೆನ್ಸ್ ಚರ್ಚ್ ಪ್ರಧಾನ ಧರ್ಮಗುರು ಅತೀ ವಂ.ಕ್ಲೆಮೆಂಟ್ ಮಸ್ಕರೇನ್ ರವಿವಾರ ಬಿಡುಗಡೆಗೊಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪೆಯನ್ನು ಕಟ್ಟುವುದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತಿದೆ. ಸಾಹಿತ್ಯ ಸಮ್ಮೇಳನಕ್ಕೆ ಮೂಡುಬೆಳ್ಳೆಯ ಜನತೆ ನಿರೀಕ್ಷೆಗೂ ಮೀರಿ ಸಂಪೂರ್ಣ ಸಹಕಾರ ನೀಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಶುಭ ಹಾರೈಸಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಧರ್ಮದರ್ಶಿ ಕಟ್ಟಿಂಗೇರಿ ದೇವ ದಾಸ್ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಸಾಪ ಉಡುಪಿ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ತಾಲೂಕು ಕೋಶಾಧಿಕಾರಿ ಎಸ್.ಎಸ್.ಪ್ರಸಾದ್, ಸಮಿತಿ ಸದಸ್ಯರಾದ ನೀಲಾನಂದ ನಾಯ್ಕಿ, ಕೃಷ್ಣಕುಮಾರ್ ರಾವ್ ಮಟ್ಟು, ಬೆಳ್ಳೆ ಪದ್ಮನಾಭ ನಾಯಕ್, ಸಮ್ಮೇಳನ ಸಮಿತಿಯ ವೇದಮೂರ್ತಿ ಪ್ರಸನ್ನ ಭಟ್, ಪಿಡಿ ಕಾಮತ್, ನಾಗರಾಜ್ ಕಾಮತ್, ವರದರಾಜ್ ಕಾಮತ್, ಎ.ಕೆ.ಆಲ್ವಾ, ರಾಜೇಂದ್ರನಾಥ್, ರಾಘವ ಕೋಟ್ಯಾನ್, ರಂಜಿತ್ ಪ್ರಭು, ಆರ್.ಡಿ.ಪಾಂಬೂರು, ಅಜಿತ್ ಕೋಟ್ಯಾನ್, ರಮೇಶ್ ಪೂಜಾರಿ, ರಾಘವೇಂದ್ರ ಶೆಟ್ಟಿ, ಸಂದೀಪ್, ಆರ್.ಡಿ.ಪಾಂಬೂರು, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News