ಡಿ.3ರಂದು ಕುಂದಾಪುರ ಫ್ಲೈ ಓವರ್ ಕಾಮಗಾರಿ ವಿಳಂಬ ವಿರೋಧಿಸಿ ಧರಣಿ

Update: 2019-12-01 14:16 GMT

ಕುಂದಾಪುರ, ಡಿ.1: ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿ ಹಾಗೂ ಕುಂದಾಪುರ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪೂರ್ಣ ಗೊಳ್ಳದ ಕುಂದಾಪುರ ಫ್ಲೈ ಓವರ್ ಕಾಮಗಾರಿಯ ದಿವ್ಯ ನಿರ್ಲಕ್ಷವನ್ನು ಖಂಡಿಸಿ ಡಿ.3ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ಯವರೆಗೆ ಕುಂದಾಪುರ ಶಾಸ್ತ್ರ ಸರ್ಕಲ್‌ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ.

 ಜೀವಕ್ಕೆ ಸಂಚಕಾರ ತಂದಿರುವ ಅವೈಜ್ಞಾನಿಕ, ಅಸ್ತವ್ಯಸ್ಥ ಹೆದ್ದಾರಿ ಸುವ್ಯವಸ್ಥಿತ್ತವಾಗುತ್ತಿಲ್ಲ. ಕಳೆದ ವರ್ಷಗಳಲ್ಲಿ ಈ ಅವೈಜ್ಞಾನಿಕ ಹೆದ್ದಾರಿ ಮತ್ತು ಕಾಮಗಾರಿಗೆ ಸಾಕಷ್ಟು ಜೀವಗಳು ಬಲಿಯಾಗಿವೆ. ಈ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವೃತ್ತಿಪರತೆಯನ್ನು ತೋರುತ್ತಿಲ್ಲ. ಜನಪ್ರತಿನಿಧಿಗಳಿಗೂ ಜನರ ಕೂಗು ಕೇಳುತ್ತಿಲ್ಲ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾದರೂ ಯಾರಿಗೂ ಕಾಳಜಿ ಇಲ್ಲ. ಶಾಲಾ ಮ್ಕಳು ರಸ್ತೆ ದಾಟಲು ವ್ಯವಸ್ಥೆ ಇಲ್ಲ.
ಈ ಎಲ್ಲ ಸಮಸ್ಯೆಗಳನ್ನು ವಿರೋಧಿಸಿ ಮತ್ತು ಹೆದ್ದಾರಿ, ಫ್ಲೈ ಓವರ್, ಎಂಬ್ಯಾಕ್ಮೆಂಟ್, ಪಾದಚಾರಿಗಳ ಸುಗಮ ಓಡಾಟ, ಸೇವಾ ರಸ್ತೆ ಹೀಗೆ ಹತ್ತಾರು ಹಕ್ಕೊತ್ತಾಯಗಳನ್ನು ಮುಂದಿಟ್ಟು, ಈ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಕಡ್ಡಾಯವಾಗಿ ಈಡೇರಿಸಬೇಕು ಎಂಬ ಒತ್ತಾಯದೊಂದಿಗೆ ಈ ಧರಣಿಯನ್ನು ನಡೆಸಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News