ಬಂಟಕಲ್ ಕಾಲೇಜಿಗೆ ಉತ್ತಮ ಐಎಸ್‌ಟಿಇ ಘಟಕ ಪ್ರಶಸ್ತಿ

Update: 2019-12-01 14:17 GMT

ಶಿರ್ವ, ಡಿ.1: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಐಎಸ್‌ಟಿಇ ಬೋಧಕ ಘಟಕಕ್ಕೆ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಿಭಾಗದ ಉತ್ತಮ ಐಎಸ್‌ಟಿಇ ಘಟಕ ಪ್ರಶಸ್ತಿ ದೊರೆತಿದೆ.

ನ.29ರಂದು ಒಡಿಸ್ಸಾ ರಾಜ್ಯದ ಭುಬನೆಶ್ವರ್‌ನ ಶಿಕ್ಷಾ ಒ ಅನುಸಂಧಾನ್ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಐಎಸ್‌ಟಿಇ ಶಿಕ್ಷಕರ ಸಮಾ ವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಷ್ಠಿತ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಸ್ಥೆಯ ಪರವಾಗಿ ಘಟಕದ ಸಂಯೋಜಕ ದೀಪಕ್ ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News