'ಸಮಸ್ತ' ವಿಶ್ವದಾದ್ಯಂತ ಕಾರ್ಯಾಚರಿಸುತ್ತಿದೆ : ಆಲಿಕುಟ್ಟಿ ಉಸ್ತಾದ್
ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಮಹಾ ಸಮ್ಮೇಳನ 2019 ಡಿ. 27,28,29 ರಂದು ಕೇರಳದ ಕೊಲ್ಲಂನಲ್ಲಿ ನಡೆಯಲಿದ್ದು, ಪ್ರಚಾರ ಸಂದೇಶ ಜಾಥಾ ಮಂಗಳೂರಿನ ಬಂದರ್ ನಲ್ಲಿ ಚಾಲನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಪ್ರಧಾನ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್, ಸಮಸ್ತ ಕೇರಳದಲ್ಲಿ ಸ್ಥಾಪನೆಗೊಂಡು 9 ದಶಕಗಳನ್ನು ದಾಟುವಾಗ ವಿಶ್ವದಾದ್ಯಂತ ತನ್ನ ಕಾರ್ಯಚಟುವಟಿಕೆಗಳನ್ನು ವ್ಯಾಪಿಸಿದೆ. ಶೈಕ್ಷಣಿಕ ರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ವಿದ್ಯಾಭ್ಯಾಸ ಮಂಡಳಿ. ಹತ್ತು ಸಾವಿರದಷ್ಟು ಮದ್ರಸಗಳನ್ನು ಹೊಂದಿದ್ದು, ವಿದೇಶಗಳಲ್ಲೂ ಕಾರ್ಯಾಚರಿಸುತ್ತಿದೆ. ಉತ್ತಮ ತರಬೇತಿ ಹೊಂದಿದ ಅಧ್ಯಾಪಕರ ಒಕ್ಕೂಟ ಜಂಇಯ್ಯತುಲ್ ಮುಅಲ್ಲಿಮೀನ್ 60ನೇ ವಾರ್ಷಿಕವನ್ನು ಆಚರಿಸುತ್ತಿದೆ ಎಂದ ಅವರು ಕೊಲ್ಲಂನಲ್ಲಿ ನಡೆಯುವ ಮಹಾ ಸಮ್ಮೇಳನಕ್ಕೆ ಆಹ್ವಾನಿಸಿದರು.
ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಧ್ಯಕ್ಷತೆ ವಹಿಸಿದರು. ಬಾವ ಜೀರಾನಿ ಮುಖ್ಯ ಪ್ರಭಾಷಣಗೈದರು. ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ಜಿಫ್ರಿ ತಂಙಳ್ ಪೊಸೊಟ್ , ಕುಟ್ಟಿ ಹಸನ್ ದಾರಿಮಿ, ಹುಸೈನ್ ತಂಙಳ್ ಶುಭ ಹಾರೈಸಿದರು.
ಜಾಥಾ ಉಪನಾಯಕ ಕೆ.ಕೆ.ಇಬ್ರಾಹಿಮ್ ಮುಸ್ಲಿಯಾರ್ ವಿವಿಧ ಸಂಸ್ಥೆಗಳಿಂದ ಸಮ್ಮೇಳನ ಉಪಹಾರ ಸ್ವೀಕರಿಸಿದರು. ಇಬ್ರಾಹಿಮ್ ಬಾಖವಿ, ಅಮೀರ್ ತಂಙಳ್, ಅನಸ್ ತಂಙಳ್, ಹುಸೈನ್ ಕುಟ್ಟಿ ಕೇರಳ, ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಇಬ್ರಾಹಿಮ್ ದಾರಿಮಿ, ಮಜೀದ್ ಫೈಝಿ, ಕಾಸಿಂ ದಾರಿಮಿ ಕಿನ್ಯ, ಶಂಸುದ್ದೀನ್ ದಾರಿಮಿ, ಐ.ಮೊಯಿದಿನಬ್ಬ ಹಾಜಿ, ಅಬ್ದುಲ್ ಲತೀಫ್ ಹಾಜಿ, ಹನೀಫ್ ಹಾಜಿ ಬಂದರ್, ರಿಯಾಝ್ ಹಾಜಿ ಬಂದರ್, ರಶೀದ್ ಹಾಜಿ ಪರ್ಲಡ್ಕ, ಇಸ್ಮಾಯಿಲ್ ಯಮಾನಿ, ತಾಜುದ್ದೀನ್ ರಹ್ಮಾನಿ, ಸಿದ್ಧೀಕ್ ಅಬ್ದುಲ್ ಖಾದರ್, ರಿಯಾಝ್ ರಹ್ಮಾನಿ, ರಝಾಕ್ ಮುಸ್ಲಿಯಾರ್ ಬಾಂಬಿಲ, ಬಶೀರ್ ದಾರಿಮಿ, ಸಿದ್ಧೀಕ್ ಫೈಝಿ ಕರಾಯ, ಆಸಿಫ್ ಅಝ್ಹರಿ, ಶರೀಫ್ ಮುಸ್ಲಿಯಾರ್ ಪರಪ್ಪು ಹಾಗು ಇತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಸ್ವಾಗತಿಸಿ, ರಫೀಕ್ ಹಾಜಿ ಕೊಡಾಜೆ ವಂದಿಸಿದರು. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಕಾರ್ಯಕ್ರಮ ನಿರ್ವಹಿಸಿದರು.