×
Ad

ಆರು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಶಿಫಾರಸು

Update: 2019-12-01 21:22 IST

ಹೊಸದಿಲ್ಲಿ, ಡಿ.1: ಅಮೃತಸರ, ವಾರಣಾಸಿ, ಭುವನೇಶ್ವರ, ಇಂದೋರ, ತಿರುಚ್ಚಿ ಮತ್ತು ರಾಯಪುರ ವಿಮಾನ ನಿಲ್ದಾಣಗಳನ್ನು ಖಾಸಗೀಕರಿಸುವಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ವು ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಈಗಾಗಲೇ ಈ ವರ್ಷದ ಫೆಬ್ರವರಿಯಲ್ಲಿ ಮಂಗಳೂರು, ಲಕ್ನೋ,ಅಹ್ಮದಾಬಾದ್,ಜೈಪುರ,ತಿರುವನಂತಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳು ಖಾಸಗೀಕರಣಗೊಂಡಿದ್ದು,ಎಎಐ ಸೆ.5ರಂದು ನಡೆದಿದ್ದ ತನ್ನ ಆಡಳಿತ ಮಂಡಳಿ ಸಭೆಯಲ್ಲಿ ಇನ್ನೂ ಆರು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ನಿರ್ಧರಿಸಿದೆ ಮತ್ತು ನಾಗರಿಕ ವಾಯುಯಾನ ಸಚಿವಾಲಯಕ್ಕೆ ತನ್ನ ಶಿಫಾರಸನ್ನು ಸಲ್ಲಿಸಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ನಾಗರಿಕ ವಾಯುಯಾನ ಸಚಿವಾಲಯದ ಅಧೀನದಲ್ಲಿರುವ ಎಎಐ ದೇಶಾದ್ಯಂತ 100ಕ್ಕೂ ಹೆಚ್ಚಿನ ವಿಮಾನ ನಿಲ್ದಾಣಗಳ ಒಡೆತನವನ್ನು ಹೊಂದಿರುವ ಜೊತೆಗೆ ಅವುಗಳನ್ನು ನಿರ್ವಹಿಸುತ್ತಿದೆ.

ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಮೊದಲ ಸುತ್ತಿನ ಖಾಸಗೀಕರಣ ಪ್ರಕ್ರಿಯೆಯಲ್ಲಿ ಅದಾನಿ ಗ್ರೂಪ್ ಎಲ್ಲ ಆರೂ ವಿಮಾನ ನಿಲ್ದಾಣಗಳಿಗೆ ಬಿಡ್‌ಗಳನ್ನು ಗೆದ್ದಿತ್ತು.

ಕೇಂದ್ರ ಸಂಪುಟವು ಅಹ್ಮದಾಬಾದ್,ಲಕ್ನೋ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್‌ಗೆ ಲೀಸ್‌ಗೆ ನೀಡಲು ಜು.3ರಂದು ಹಸಿರು ನಿಶಾನೆಯನ್ನು ತೋರಿಸಿದ್ದು,ಇತರ ಮೂರು ವಿಮಾನ ನಿಲ್ದಾಣಗಳಿಗೆ ಇನ್ನಷ್ಟೇ ಒಪ್ಪಿಗೆಯನ್ನು ನೀಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News