ಭಟ್ಕಳ: ವಿದ್ಯುತ್ ಕಂಬಕ್ಕೆ ಪಿಕ್‍ಅಪ್ ವಾಹನ ಢಿಕ್ಕಿ

Update: 2019-12-01 16:47 GMT

ಭಟ್ಕಳ: ಶಿರಾಲಿಯಿಂದ ಭಟ್ಕಳ ಕಡೆ ಬರುತ್ತಿದ್ದ ಪಿಕ್‍ಅಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸುಮಾರು 200ಮೀ. ದೂರ ಎಳೆದುಕೊಂಡು ಹೋದ ಘಟನೆ ರವಿವಾರ ಇಲ್ಲಿನ ರಾ.ಹೆ.66ರ ಶಿಫಾ ಕ್ರಾಸ್ ಬಳಿ ನಡೆದಿದೆ. 

ಪಿಕ್‍ಅಪ್ ವಾಹನದಲ್ಲಿ  ಮರಳು ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದ್ದು ಶಿರಾಲಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದರೂ ನಿಲ್ಲಿಸದೆ ಅತಿವೇಗವಾಗಿ ವಾಹನ ಚಲಾಯಿಸಿಕೊಂಡು ಬಂದ ಕಾರಣ ಶಿಫಾ ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಹೆಸ್ಕಾಂ ಇಲಾಖೆಗೆ 15 ಸಾವಿರ ರೂ. ನಷ್ಟವುಂಟಾಗಿದ್ದು ಅಪಘಾತ ಮಾಡಿದ ವ್ಯಕ್ತಿಯೆ ಹಣವನ್ನು ಭರಿಸಿದ್ದಾನೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.  

ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News