×
Ad

ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ವಾರ್ಷಿಕ ಕ್ರೀಡಾ ದಿನಾಚರಣೆಗೆ ಚಾಲನೆ

Update: 2019-12-02 13:28 IST

ಮಂಗಳೂರು, ಡಿ.2: ಜೆಪ್ಪಿನಮೊಗರುವಿನಲ್ಲಿರುವ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ವಾರ್ಷಿಕ ಕ್ರೀಡಾಕೂಟವು ನಗರದ ಮಂಗಳಾ ಕ್ರೀಡಾಂಗಣದಲ್ಲಿಂದು ಜರುಗಿತು.

 ಮಂಗಳೂರು ಉಪ ಪೊಲೀಸ್ ಆಯುಕ್ತ ಲಕ್ಷೀಗಣೇಶ್ ಧ್ವಜಾರೋಹಣಗೈದು ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಪೊರೇಶನ್ ಬ್ಯಾಂಕಿನ ನಿವೃತ್ತ ಹಿರಿಯ ಮಹಾನಿರ್ದೇಶಕ ಬಿ‌.ಎಂ.ಭಟ್  ಮಾತನಾಡುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡಾ ಚಟುವಟಿಕೆ ಮುಖ್ಯ. ಈ ನಿಟ್ಟಿನಲ್ಲಿ ಪ್ರೆಸ್ಟೀಜ್ ಶಿಕ್ಷಣ ಸಂಸ್ಥೆಯ ತರಬೇತುದಾರ, ಶಿಕ್ಷಕರ ಪ್ರಯತ್ನ, ಆಡಳಿತ ಮಂಡಳಿಯ ಪ್ರೋತ್ಸಾಹ ಶ್ಲಾಘನೀಯ ಎಂದರು.

ಪ್ರಸ್ಟೀಜ್  ಶಿಕ್ಷಣ ಸಂಸ್ಥೆ ಗಳ ಸಮೂಹದ ಅಧ್ಯಕ್ಷ ಹೈದರ್ ಅಲಿ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮನಪಾ ಸದಸ್ಯೆ ವೀಣಾ ಮಂಗಳ, ಪ್ರಾಂಶುಪಾಲೆ ಫಿರೋಝಾ ಫಯಾಝ್, ಆಡಳಿತ ನಿರ್ದೇಶಕಿ ರೇಶ್ಮಾ ಹೈದರ್, ಟ್ರಸ್ಟಿಗಳಾದ ರಾಹಿಲ್ ಹೈದರ್, ಸೈಯದ್ ಫೈಝಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News