ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಹಾಂಕಾಂಗ್ ಆರ್ಥಿಕತೆ : ಹಣಕಾಸು ಕಾರ್ಯದರ್ಶಿ ಎಚ್ಚರಿಕೆ

Update: 2019-12-02 14:41 GMT
ಫೋಟೊ ಕೃಪೆ: Bloomberg

ಹಾಂಕಾಂಗ್, ಡಿ. 2: ಹಾಂಕಾಂಗ್ ವ್ಯಾಪಾರ ಸಮರ ಮತ್ತು ಪ್ರಜಾಪ್ರಭುತ್ವ ಪರ ಹಿಂಸಾತ್ಮಕ ಪ್ರತಿಭಟನೆ ಎಂಬ ಅವಳಿ ಆಘಾತಗಳಿಂದ ತತ್ತರಿಸಿದ್ದು, 15 ವರ್ಷಗಳಲ್ಲೇ ಮೊದಲ ಬಾರಿಗೆ ಕೊರತೆ ಬಜೆಟನ್ನು ಮಂಡಿಸಲು ಸಿದ್ಧಗೊಳ್ಳುತ್ತಿದೆ ಎಂದು ನಗರದ ಹಣಕಾಸು ಮುಖ್ಯಸ್ಥರು ಸೋಮವಾರ ಎಚ್ಚರಿಸಿದ್ದಾರೆ.

ಹಾಂಕಾಂಗ್ ಆರ್ಥಿಕತೆಯು 2019ರಲ್ಲಿ 1.3 ಶೇಕಡದಷ್ಟು ಕುಸಿದಿದೆ ಎಂದು ಹಣಕಾಸು ಕಾರ್ಯದರ್ಶಿ ಪೌಲ್ ಚಾನ್ ಸಂಸದರಿಗೆ ತಿಳಿಸಿದರು.

ಕಡಿಮೆಯಾದ ತೆರಿಗೆ ಆದಾಯ, ಜಮೀನು ಮಾರಾಟದಲ್ಲಿ ಆಗಿರುವ ಹಿನ್ನಡೆ ಹಾಗೂ ಪ್ರಜಾಪ್ರಭುತ್ವಪರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜನರ ವಿಶ್ವಾಸವನ್ನು ಗಳಿಸುವುದಕ್ಕಾಗಿ ಘೋಷಿಸಲಾದ ಆರ್ಥಿಕ ರಿಯಾಯಿತಿಗಳೇ ಹಾಂಕಾಂಗ್‌ನ 2019-2020ರ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿವೆ ಎಂದು ಅವರು ದೂರಿದರು.

‘‘ಆರ್ಥಿಕ ವರ್ಷದ ಕೊನೆಯ ವೇಳೆಗೆ, ಹಾಂಕಾಂಗ್ ಸರಕಾರವು ಸಂಕಷ್ಟಕ್ಕೆ ಸಿಲುಕಲಿದೆ’’ ಎಂದು ಚಾನ್ ನುಡಿದರು.

‘‘ಹಾಂಕಾಂಗ್‌ನ ಆರ್ಥಿಕತೆ ಈಗ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದೆ’’ ಎಂದು ಚಾನ್ ಹೇಳಿದರು. ರಾಜಕೀಯ ಹಿಂಸಾಚಾರ ನಿಲ್ಲಬೇಕೆಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News