ಉಡುಪಿ: ಮಾತೃವಂದನ ಸಪ್ತಾಹ ಉದ್ಘಾಟನೆ

Update: 2019-12-02 14:57 GMT

ಉಡುಪಿ, ಡಿ.2: ಜಿಲ್ಲೆಯಲ್ಲಿ ಇಂದಿನಿಂದ ಒಂದು ವಾರದವರೆಗೆ ‘ಮಾತೃವಂದನ ಸಪ್ತಾಹ’ ಜರಗಲಿದ್ದು, ಮೊದಲ ಬಾರಿಗೆ ಗರ್ಭಿಣಿಯಾಗುವ ತಾಯಂದಿರಿಗೆ ಮೂರು ಹಂತದಲ್ಲಿ 5 ಸಾವಿರ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ನೀಡಲಾಗು ವುದು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆಯಡಿ ನಯಂಪಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಾತೃವಂದನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಾತೃ ವಂದನಾ ಯೋಜನೆಯಡಿ, ಮೊದಲ ಬಾರಿ ಗರ್ಭಿಣಿ ಆಗಿರುವ ಮಹಿಳೆಯರಿಗೆ ಮೊದಲ ಹಂತದಲ್ಲಿ 150 ದಿನಗಳ ಒಳಗೆ ರೂ.1000, ಎರಡನೇ ಹಂತದಲ್ಲಿ 180 ದಿನಗಳ ಒಳಗೆ ರೂ. 2000 ಹಾಗೂ ಮಗು ಜನಿಸಿದ ನಂತರ 2000 ರೂ.ಗಳನ್ನು ನೇರವಾಗಿ ಗರ್ಭಿಣಿ ಮಹಿಳೆಯರ ಬ್ಯಾಂಕ್ ಖಾತೆಗೆ ಒಟ್ಟು ಮೂರು ಹಂತದಲ್ಲಿ 5000 ರೂ.ಗಳನ್ನು ನೀಡಲಾ ಗುವುದು. ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿಯೂ ಈ ನೊಂದಣಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಉಡುಪಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸರೋಜ ಹಾಗೂ ಇತರರು ಉಪಸ್ಥಿತರಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಶಾಂತಿ ಪ್ರಭು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News