ಕಲ್ಯಾಣಪುರ: ಕೆಥೊಲಿಕ್ ಸಭಾ ಸಹಮಿಲನ ಕಾರ್ಯಕ್ರಮ

Update: 2019-12-02 15:31 GMT

ಉಡುಪಿ, ಡಿ.2: ಸೇವೆಗೆ ಅತೀ ವೇಗದಲ್ಲಿ ಪ್ರತಿಫಲ ಸಿಗಬೇಕು ಎನ್ನುವುದ ಕ್ಕಿಂತ ಸೇವೆಯ ಮೌಲ್ಯವನ್ನು ಅರಿಯು ವಂತಾಗಬೇಕು ಎಂದು ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ವಂ.ಅನಿಲ್ ಪ್ರಕಾಶ್ ಕ್ಯಾಸ್ತಲಿನೊ ಹೇಳಿದ್ದಾರೆ.

ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚಿನ ವಠಾರದಲ್ಲಿ ರವಿವಾರ ಜರಗಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯ ಸಮಿತಿಯ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೆಥೊಲಿಕ್ ಸಭಾ ಕೇಂದ್ರಿಯ ಸಮಿತಿಯ ಮಾಜಿ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ ದಿಕ್ಸೂಚಿ ಭಾಷಣ ಮಾಡಿ, ಕೆಥೊಲಿಕ್ ಸಭಾ ಸಂಘಟನೆ ತನ್ನ ಸಮಾಜಮುಖಿ ಸೇವೆಯಿಂದ ಒಂದು ಬಲಿಷ್ಠ ಸಂಸ್ಥೆಯಾಗಿ ರೂಪುಗೊಂಡಿದ್ದು ಜನಸಾಮಾನ್ಯರ ಆಶೋತ್ತರ ಗಳಿಗೆ ಅನುಗುಣವಾಗಿ ಸೇವೆಯನ್ನು ನೀಡುತ್ತಿದೆ. ಕೆಥೊಲಿಕ್ ಸಭಾ ಸಂಘಟನೆ ನಮ್ಮದೇ ಎಂಬ ಭಾವನೆ ಮೂಡಿದಾಗ ಅದನ್ನು ಇನ್ನಷ್ಟು ಬಲಿಷ್ಠವಾಗಿಸಬಹುದು ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕಲ್ಯಾಣಪುರ ವಲಯ ಸಮಿತಿ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಹಿಸಿದ್ದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಲ್ಯಾಣ ಪುರ ವಲಯ ಶ್ರೀಸಾಮಾನ್ಯರ ಆಯೋಗದ ನಿರ್ದೇಶಕ ವಂ.ಜೊಸೇಫ್ ಮಚಾದೊ, ಅತಿಥಿ ಧರ್ಮಗುರು ವಂ.ರೋಮನ್ ಮಸ್ಕರೇನ್ಹಸ್, ಕೆಂದ್ರೀಯ ಸಮಿತಿ ಮಾಜಿ ಅಧ್ಯಕ್ಷರಾದ ಎಲ್ರೋಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ವಲಯ ಸಮಿತಿ ಸಂಚಾಲಕ ಸ್ಟೀವನ್ ಪ್ರಕಾಶ್ ಲೂವಿಸ್, ವಲಯ ಕಾರ್ಯದರ್ಶಿ ರೋಜಿ ಕ್ವಾಡ್ರಸ್, ಕೋಶಾಧಿಕಾರಿ ಫೆಲಿಕ್ಸ್ ಪಿಂಟೊ, ಕೊಳಲಗಿರಿ ಘಟಕದ ಅಧ್ಯಕ್ಷ ಫಾತಿಮಾ ಬಾರ್ನೆಸ್, ಕಾರ್ಯದರ್ಶಿ ಸಿರಿಲ್ ಮೊಂತೆರೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News