​ಸಾಲಿಗ್ರಾಮ: ಮನೆ ನಿರ್ಮಾಣಕ್ಕೆ ಸಹಾಯ ಧನ

Update: 2019-12-02 15:49 GMT

ಉಡುಪಿ, ಡಿ.2: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತ ಕುಟುಂಬಗಳಿಗೆ 2022ರ ಅವಧಿಯೊಳಗೆ ವಸತಿ ಸೌಲಭ್ಯ ಒದಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ)ಯ ಮುಖ್ಯ ಉದ್ದೇಶವಾಗಿದ್ದು, ಆದುದರಿಂದ ವಸತಿ ರಹಿತರಿಗೆ ಬಿಎಲ್‌ಸಿ ಘಟಕ ದಡಿ ಸ್ವಂತ ನಿವೇಶನ ಹೊಂದಿದವರಿಗೆ ಮನೆ ನಿರ್ಮಿಸಿಕೊಳ್ಳಲು 1.50 ಲಕ್ಷ ರೂ. ಸಹಾಯದನವನ್ನು ಒದಗಿಸಲಾಗುವುದು.

ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ಆದಾಯ ಪ್ರಮಾಣ ಪತ್ರ(3 ಲಕ್ಷ ರೂ. ಒಳಗಿರತಕ್ಕದ್ದು), ಆಧಾರ್‌ಕಾರ್ಡ್ ಪ್ರತಿ (ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಪ್ರತಿ), ಆರ್‌ಟಿಸಿ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ(ರೇಷನ್ ಕಾರ್ಡ್), ಕುಟುಂಬದ ಮುಖ್ಯಸ್ಥರು ಅಥವಾ ಸದಸ್ಯರ ಹೆಸರಿನಲ್ಲಿ ಯಾವುದೇ ಪಕ್ಕಾ ಮನೆ ಹೊಂದಿಲ್ಲವೆಂದು ಸ್ವಯಂ ಘೋಷಿತ ಪತ್ರಗಳನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಗೆ ಡಿ.10ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ್‌ನ ದೂರವಾಣಿ ಸಂಖ್ಯೆ: 0820-2564229, ಕೆ.ಚಂದ್ರಶೇಖರ ಸೋಮಯಾಜಿ ಮೊ.ನಂ: 9480485696ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News