ಮಂಗಳೂರು: ಅಪ್ರಾಪ್ತ ಬಾಲಕಿಯ ಅಪಹರಣ

Update: 2019-12-02 16:13 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ.2: ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ಅಪಹರಣವಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಕಿಯು ನಗರದ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ನ.30ರಂದು ಸಂಜೆ 4 ಗಂಟೆಗೆ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದರು. ಸಂಜೆ ವಾರ್ಷಿಕೋತ್ಸವದ ಫೋಟೋವನ್ನು ತನ್ನ ತಾಯಿಗೆ ಕಳಿಸಿದ್ದಾರೆ. ಆದರೆ ಬಳಿಕ ಯಾವುದೇ ಕರೆ, ಸಂದೇಶ ಮಾಡಿರಲಿಲ್ಲ. ರಾತ್ರಿ 9ಗಂಟೆಯಾದರೂ ಮಗಳು ಮನೆಗೆ ಬಾರದಿದ್ದದನ್ನು ಕಂಡು ಮನೆಯವರು ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಬಳಿಕ ಆಕೆಯ ಗೆಳತಿಯರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಗಲಿಲ್ಲ. ಕಾಲೇಜು, ನಗರದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು ವಾರ್ಷಿಕೋತ್ಸವಕ್ಕೆ ಹೋದ ಆಕೆಯನ್ನು ಅಪಹರಿಸಿರುವ ಸಾಧ್ಯತೆಯಿದೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಹರೆ: 5.5 ಅಡಿ ಉದ್ದ, ಬಿಳಿ ಮೈ ಬಣ್ಣ, ಸಾಧಾರಣ ಶರೀರ, ಕೋಲು ಮುಖ, ಮೂಗಿನ ಕೆಳಗಡೆ ಕಪ್ಪು ಎಳ್ಳು ಮಚ್ಚೆಯಿದೆ.
ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ಸಿಕ್ಕವರು ಕಂಕನಾಡಿ ನಗರ ಠಾಣೆಗೆ ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News