ಮಂಗಳೂರು: ಎಸ್ಕೆಎಸ್ಸೆಸ್ಸೆಫ್‌ನಿಂದ ‘ಜಶ್ನೇ ಮದೀನಾ’ ಮೀಲಾದ್ ಕಾನ್ಫರೆನ್ಸ್

Update: 2019-12-02 16:26 GMT

ಮಂಗಳೂರು, ಡಿ. 2: ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ‘ಜಶ್ನೇ ಮದೀನಾ-ಮೀಲಾದ್ ಕಾನ್ಫರೆನ್ಸ್’ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ ನಲ್ಲಿ ಸೋಮವಾರ ನಡೆಯಿತು.

ದಕ್ಷಿಣ ಕರ್ನಾಟಕ ಸಮಸ್ತ ಮುಶಾವರದ ಅಧ್ಯಕ್ಷ ಶೈಖುನಾ ಅಸೈಯದ್ ಝೈನುಲ್ ಆಬಿದೀನ್ ತಂಙಳ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರವಾದಿ ಮೇಲಿನ ಪ್ರೇಮವನ್ನು‌ ಒಂದು ದಿನ ಅಥವಾ ತಿಂಗಳಿಗೆ ಸೀಮಿತ ಗೊಳಿಸದೆ ಜೀವನ ಪೂರ್ತಿ ಅವರ ಆದರ್ಶಗಳನ್ಮು ಮೈಗೂಡಿಸುವ ಮೂಲಕ ವ್ಯಕ್ತಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರದ ನೂತನ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಎಸ್ಕೆಎಸ್ಸೆಸ್ಸೆಫ್ ದಮಾಮ್ ಘಟಕದ ಅಧ್ಯಕ್ಷ ಅಬ್ದುರ್ರಹ್ಮಾನ್ ದಾರಿಮಿ ನೆಲ್ಯಾಡಿ ಅವರನ್ನು ಸನ್ಮಾನಿಸಲಾಯಿತು.

ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಾಗ್ಮಿ ಎಎಂ ನೌಶಾದ್ ಬಾಖವಿ ಮುಖ್ಯ ಪ್ರಭಾಷಣಗೈದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಙಳ್ ಕಿನ್ಯ ದುಆಗೈದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ‌ ಪ್ರಾಸ್ತಾವಿಕ ಭಾಷಣ ಮಾಡಿದರು.

ಅತಿಥಿಗಳಾಗಿ ರಾಜ್ಯ ಫೈಝೀಸ್ ಅಧ್ಯಕ್ಷ ಉಸ್ಮಾನ್ ಫೈಝಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಫ್ ಹಾಂ ತಂಙಳ್, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ, ಶರೀಫ್ ಫೈಝಿ ಕಡಬ, ತಬೂಕ್ ದಾರಿಮಿ, ಅನ್ಸಾರ್ ಫೈಝಿ ಅಡ್ಯಾರ್, ಸುಲೈಮಾನ್ ಫೈಝಿ ಕನ್ಯಾನ, ಇಸ್ಮಾಯಿಲ್ ಫೈಝಿ ಕಲ್ಲಡ್ಕ, ಉಸ್ಮಾನ್ ದಾರಿಮಿ ಬಂಟ್ವಾಳ, ಇಸಾಕ್ ಫೈಝಿ ಕುಕ್ಕಿಲ, ರೇಂಜ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ರೇಂಜ್ ಜಿಲ್ಲಾಧ್ಯಕ್ಷ ಲತೀಫ್ ದಾರಿಮಿ ರೆಂಜಾಡಿ, ಎಲ್ ಟಿ ಹಸನ್ ಹಾಜಿ ಪುತ್ತೂರು, ಕೆಕೆ ಅಬೂಬಕ್ಕರ್ ಕೋಲ್ಪೆ ಭಾಗವಹಿಸಿದ್ದರು.

ವೇದಿಕೆಯಲ್ಲಿ  ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ,  ರಶೀದ್ ರಹ್ಮಾನಿ ಕೋಲ್ಪೆ, ಮುಹಮ್ಮದ್ ಕುಂಞಿ ಮಾಸ್ಟರ್, ತಾಜುದ್ದೀನ್ ರಹ್ಮಾನಿ,  ಆರೀಫ್ ಬಡಕಬೈಲ್, ಶರೀಫ್ ಕಕ್ಕಿಂಜೆ, ಹನೀಫ್ ದೂಮಳಿಕೆ, ಪಿಎ ಮರ್ದಾಳ, ಅಝೀಝ್ ಮಲಿಕ್ ಮೂಡುಬಿದಿರೆ, ಮಜೀದ್ ದಾರಿಮಿ‌ ಕುಂಬ್ರ, ಇಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಶಾಫಿ ದಾರಿಮಿ ಅಜ್ಜಾವರ, ಅಶ್ರಫ್ ಶೇಡಿಗುಂಡಿ, ಇಬ್ರಾಹಿಂ ಕೋಣಾಜೆ, ಶರೀಫ್ ಮೂಸಾ ಕುದ್ದುಪದವು, ಹಕೀಂ ಪರ್ತಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ಸ್ವಾಗತಿಸಿದರು. ಟ್ರೆಂಡ್ ನಾಯಕ ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News