ಆತ್ಮಹತ್ಯೆ
Update: 2019-12-02 22:14 IST
ಉಡುಪಿ, ಡಿ.2: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಂಬಲಪಾಡಿ ವಿಠೋಭಾ ಭಜನ ಮಂದಿರ ಬಳಿಯ ನಿವಾಸಿ ಸದಾನಂದ ಕೆ.ಕೋಟ್ಯಾನ್ (54) ಎಂಬವರು ಡಿ.1ರಂದು ಸಂಜೆ ವೇಳೆ ಮನೆಯ ಡೈನಿಂಗ್ ಹಾಲ್‌ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.