ಟೆಕ್ಸಾಸ್: ವಿಮಾನ ಪತನ; 3 ಸಾವು

Update: 2019-12-02 18:16 GMT

ವಾಶಿಂಗ್ಟನ್, ಡಿ. 2: ಅಮೆರಿಕದ ಟೆಕ್ಸಾಸ್ ರಾಜ್ಯದ ಸ್ಯಾನ್ ಆಂಟೋನಿಯೊ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ಭಾಗದಲ್ಲಿ ರವಿವಾರ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಎನ್‌ ಬಿಸಿ ಶಿಕಾಗೊ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಶುಗರ್‌ ಲ್ಯಾಂಡ್‌ ನಿಂದ ಬೋರ್ನ್‌ ಗೆ ಪ್ರಯಾಣಿಸುತ್ತಿದ್ದಾಗ ವಿಮಾನದ ಇಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತು. ಹಾಗಾಗಿ ಅದನ್ನು ಸ್ಯಾನ್ ಆಂಟೋನಿಯೊ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.

ಬಳಿಕ ವಿಮಾನವು ಕಾಲು ದಾರಿಯೊಂದಕ್ಕೆ ಅಪ್ಪಳಿಸಿತು ಹಾಗೂ ಅದರಲ್ಲಿದ್ದ ಎಲ್ಲ ಮೂವರು ಪ್ರಯಾಣಿಕರು ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News