ಹಳೆಯಂಗಡಿ : ಏಕದಿನ ಮತ ಪ್ರಭಾಷಣಕ್ಕೆ ಚಾಲನೆ
Update: 2019-12-03 11:04 IST
ಹಳೆಯಂಗಡಿ : ಶಂಸುಲ್ ಉಲಮಾ ಹಿಫ್ಳುಳ್ ಕುರ್ ಆನ್ ಕಾಲೇಜು ಬೊಳ್ಳೂರು ಹಳೆಯಂಗಡಿ ಇದರ ಆಶ್ರಯದಲ್ಲಿ ಏಕದಿನ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಇಂದು ರಾತ್ರಿ 7 ಗಂಟೆಗೆ ಬೊಳ್ಳೂರಿನ ಶಂಸುಲ್ ಉಲಮಾ ನಗರದ ಮೈದಾನದಲ್ಲಿ ನಡೆಯಲಿದ್ದು ಬೆಳಗ್ಗೆ 9 ಗಂಟೆಗೆ ದ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.
ದ್ವಜಾರೋಹಣದ ನೇತೃತ್ವವನ್ನು ಸಂಸ್ಥೆಯ ಗೌರವಾಧ್ಯಕ್ಷ ಶೈಖುನಾ ಬೊಳ್ಳೂರು ಉಸ್ತಾದ್ ವಹಿಸಿದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಬಿ.ಇ ಮಹಮ್ಮದ್, ಕಾರ್ಯದರ್ಶಿ ಜಿ.ಎಮ್. ಹನೀಫ್ ದಾರಿಮಿ, ಉಪಾಧ್ಯಕ್ಷ ಎಮ್. ಅಬ್ದುಲ್ ಖಾದರ್, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಅಧ್ಯಕ್ಷ ಯೂಸೂಫ್, ಕಾರ್ಯದರ್ಶಿ ದಾವೂದ್ ಇಂದಿರಾನಗರ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬಾವ, ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಅಧ್ಯಕ್ಷ ಅಕೀಲ್ ಎಮ್.ಸಿ.ಎಫ್, ಕಾರ್ಯದರ್ಶಿ ಅನೀಸ್ ಕೊಪ್ಪಲ, ವಿಖಾಯ ಚೇರ್ಮ್ಯಾನ್ ಹುಸೈನಬ್ಬ ಬೊಳ್ಳೂರು ಸೇರಿ ಇನ್ನಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.