ಲೂಸಿ ಮಾರ್ಸೆಲ್ ಡಿಸೋಜಾ ನಿಧನ

Update: 2019-12-03 06:25 GMT

ಮುಂಬೈ : ಮಂಗಳೂರು ಧರ್ಮತೋಟ ಫಜೀರು ನಿವಾಸಿ ಲೂಸಿ ಮಾರ್ಸೆಲ್ ಡಿಸೋಜಾ (89) ಮಂಗಳವಾರ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಅಪಾರ ಸಾಮಾಜಿಕ ಕಳಕಳಿ, ಧರ್ಮ ನಿಷ್ಠಾಳು ಆಗಿದ್ದ ಮೃತರು ರೆ| ಫಾ| ಪಾವ್ಲ್ ಡಿಸೋಜಾ (ವಾರಣಾಸಿ ಧರ್ಮಪ್ರಾಂತ್ಯ), ರೆ| ಫಾ| ಬೊನಿಫಸ್ ಡಿಸೋಜಾ (ಕಾರ್ಮೆಲಿತ್) ಸೇರಿದಂತೆ ಏಳು ಮಂದಿ ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಡಿ. 5ರಂದು ಅವರ್ ಲೇಡಿ ಆಫ್ ಮರ್ಸಿ ಇಗರ್ಜಿ ಫಜೀರು ನಲ್ಲಿ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News