‘ನೀರು ಕುಡಿಸಿದ ನೀರೆಯರು’ ನಾಟಕಕ್ಕೆ ಅಗ್ರಪ್ರಶಸ್ತಿ
ಉಡುಪಿ, ಡಿ.3: ಸೋಮವಾರ ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಕ್ತಾಯಗೊಂಡ ರಂಗಭೂಮಿ ಉಡುಪಿ ಇವರ 40ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೆಂಗಳೂರಿನ ಸಮಷ್ಠಿ ತಂಡ ಪ್ರದರ್ಶಿಸಿದ ಮಂಜುನಾಥ ಎಲ್.ಬಡಿಗೇರ್ ಇವರ ‘ನೀರು ಕುಡಿಸಿದ ನೀರೆಯರು’ ನಾಟಕ ಅಗ್ರಪ್ರಶಸ್ತಿಯೊಂದಿಗೆ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕವನ್ನು ಗೆದ್ದುಕೊಂಡಿತು.
ಅಲ್ಲದೇ ಈ ತಂಡ ಮಂಗಳೂರಿನ ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ 35,000 ರೂ. ಹಾಗೂ ಸ್ಮರಣಿಕೆಗೂ ಭಾಜನವಾಯಿತು.
ಸ್ಪರ್ಧೆಯ ದ್ವಿತೀಯ ಬಹುಮಾನ ಬೆಂಗಳೂರಿನ ಅದ್ಯಮ ರಂಗ ಸಂಸ್ಕೃತಿ ಟ್ರಸ್ಟ್‌ನ ಐತಿಹಾಸಿಕ ನಾಟಕ ‘ಮೀಡಿಯ’ದ ಪಾಲಾಯಿತು. ಈ ತಂಡ ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಶಸ್ತಿಯೊಂದಿಗೆ 25,000ರೂ.ನಗದು ಹಾಗೂ ಸ್ಮರಣಿಕೆಯನ್ನು ಗೆದ್ದುಕೊಂಡಿತು.
ಮಂಗಳೂರಿನ ರಂಗ ಸಂಗಾತಿ ಸಂಸ್ಕೃತಿ ಪ್ರತಿಷ್ಠಾನ ತಂಡ ಪ್ರದರ್ಶಿಸಿದ ವೈದೇಹಿ ಅವರ ಮೂಲ ಕತೆಯನ್ನು ಆಧರಿಸಿದ ‘ಮರ ಗಿಡ ಬಳ್ಳಿ’ ನಾಟಕವು ತೃತೀಯ ಬಹುಮಾನವನ್ನು ಪಡೆದುಕೊಂಡಿತು. ತಂಡ ದಿ. ಪಿ.ವಾಸುದೇವ ರಾವ್ ಕುಟುಂಬ ಮತ್ತು ಡಾ.ಪಿ.ಗಣಪತಿ ರಾವ್ ಸ್ಮಾರಕ ಪ್ರಶಸ್ತಿಯೊಂದಿಗೆ 15,000ರೂ. ನಗದು ಬಹುಮಾನ ಹಾಗೂ ಸ್ಮರಣಿಕೆಗೆ ಅರ್ಹತೆ ಪಡೆಯಿತು.
ಒಟ್ಟು 12 ದಿನಗಳ ಕಾಲ 12 ತಂಡಗಳು ಭಾಗವಹಿಸಿದ್ದ ನಾಟಕ ಸ್ಪರ್ಧೆಯ ಉಳಿದ ಬಹುಮಾನ ವಿಜೇತರ ವಿವರ ಹೀಗಿದೆ.
ಶ್ರೇಷ್ಠ ನಿರ್ದೇಶನ: ಮಂಜುನಾಥ ಎಲ್.ಬಡಿಗೇರ, ಸಮಷ್ಠಿ ಬೆಂಗಳೂರು ತಂಡದ ನೀರು ಕುಡಿಸಿದ ನೀರೆಯರು (ಪ್ರಥಮ-ಡಾ.ಟಿಎಂಎಪೈ ಸ್ಮಾರಕ ಪರ್ಯಾಯ ಫಲಕ ಮತ್ತು 5000ರೂ.), ಮಾಲತೇಶ್ ಬಡಿಗೇರ, ಬೆಂಗಳೂರಿನ ಅದ್ಯಮ ರಂಗ ಸಂಸ್ಕೃತಿ ಟ್ರಸ್ಟ್‌ನ ಮೀಡಿಯ (ದ್ವಿತೀಯ-3,000 ರೂ., ಸ್ಮರಣಿಕೆ), ಎಸ್.ರಾಮು, ಮೈಸೂರು ಮೈಮ್‌ಟೀಮ್‌ನ ಕೋರ್ಟ್ ಮಾರ್ಷಲ್ (ತೃತೀಯ-2,000ರೂ.ಸ್ಮರಣಿಕೆ).
ಶ್ರೇಷ್ಠ ನಟ: ಹರಿ ಸಮಷ್ಠಿ, ಬೆಂಗಳೂರು ಸಮಷ್ಠಿ ನೀರು ಕುಡಿಸಿದ ನೀರೆಯರು ನಾಟಕದ ಕಾಳಿಂಗರಾಯ ಪಾತ್ರ (ಪ್ರಥಮ- 3,000ರೂ. ಮತ್ತು ಸ್ಮರಣಿಕೆ), ಅಂಕರಾಜು, ಮೈಸೂರು ಮೈಮ್ ಟೀಮ್‌ನ ಕೋರ್ಟ್ ಮಾರ್ಷಲ್ ನಾಟಕದ ಕ್ಯಾ.ಬಿಕಾಶ್ ರಾಯ್ (ದ್ವಿತೀಯ-2,000ರೂ., ಸ್ಮರಣಿಕೆ),ನವೀನ್, ಬೆಂಗಳೂರು ಸೈಡ್‌ವಿಂಗ್ ಕಲ್ಚರಲ್ ಟ್ರಸ್ಟ್‌ನ ನಾಯೀಕತೆ ನಾಟಕದ ನಾಯಿ ಮಗ (ತೃತೀಯ-1,000,ಸ್ಮರಣಿಕೆ).
ಶ್ರೇಷ್ಠ ನಟಿ: ಮಂಜುಳಾ ಜನಾರ್ದನ್, ಮಂಗಳೂರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಮರ ಗಿಡ ಬಳ್ಳಿ ನಾಟಕದ ಮಂದಕ್ಕ (ಪ್ರಥಮ- 1,000ರೂ., ಸ್ಮರಣಿಕೆ), ಛಾಯಾ ಭಾರ್ಗವಿ, ಬೆಂಗಳೂರಿನ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ನ ಮೀಡಿಯ ನಾಟಕದ ಮೀಡಿಯ (ದ್ವಿತೀಯ-2,000ರೂ., ಸ್ಮರಣಿಕೆ), ಪ್ರತಿಭಾ ವಕ್ಕುಂದ, ಬೆಳಗಾವಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಜಾಳ ಪೋಳ ನಾಟಕದ ಗುಂಡಕ್ಕ (ತೃತೀಯ- 1,000ರೂ., ಸ್ಮರಣಿಕೆ).
ಶ್ರೇಷ್ಠ ಸಂಗೀತ: ಬೆಂಗಳೂರು ದೃಶ್ಯ ಕಾವ್ಯ ತಂಡದ ‘ಮಾಯಾಬೇಟೆ’ (ಪ್ರಥಮ-3,000ರೂ., ಸ್ಮರಣಿಕೆ), ಬೆಂಗಳೂರು ಸೈಡ್ ವಿಂಗ್ ಕಲ್ಚರಲ್ ಟ್ರಸ್ಟ್‌ನ ನಾಯೀಕತೆ (ದ್ವಿತೀಯ- 2000ರೂ.), ಬೆಂಗಳೂರು ಸಮಷ್ಠಿ ತಂಡದ ನೀರು ಕುಡಿಸಿದ ನೀರೆಯರು (ತೃತೀಯ-1,000ರೂ.).
ಶ್ರೇಷ್ಠ ರಂಗಪರಿಕರ: ಬೆಂಗಳೂರು ಸಮಷ್ಠಿ ‘ನೀರು ಕುಡಿಸಿದ ನೀರೆಯರು’ (ಪ್ರಥಮ-3,000ರೂ.), ಬೆಂಗಳೂರು ಅದಮ್ಯ ರಂಗಸಂಸ್ಕೃತಿ ಟ್ರಸ್ಟ್‌ನ ‘ಮೀಡಿಯ’ (ದ್ವಿತೀಯ-2,000ರೂ.), ಮಂಗಳೂರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ’ಮರ ಗಿಡ ಬಳ್ಳಿ’ (ತೃತೀಯ-1,000).
ಶ್ರೇಷ್ಠ ಪ್ರಸಾಧನ: ನೀರು ಕುಡಿಸಿದ ನೀರೆಯರು (ಪ್ರಥಮ-3,000ರೂ. ಸ್ಮರಣಿಕೆ), ಮೀಡಿಯ (ದ್ವಿತೀಯ-2000ರೂ.), ತೆಕ್ಕಟ್ಟೆ ಶ್ರೀಕೈಲಾಸ ಕಲಾಕ್ಷೇತ್ರ ಟ್ರಸ್ಟ್‌ನ ‘ಮದುವೆ ಹೆಣ್ಣು’ (ತೃತೀಯ-1000ರೂ.).
ಶ್ರೇಷ್ಠ ರಂಗ ಬೆಳಕು: ನೀರು ಕುಡಿಸಿದ ನೀರೆಯರು (ಪ್ರಥಮ- 3000ರೂ., ಸ್ಮರಣಿಕೆ), ಮರ ಗಿಡ ಬಳ್ಳಿ (ದ್ವಿತೀಯ-2000), ಮೀಡಿಯ (ತೃತೀಯ-1000ರೂ.).
ಶ್ರೇಷ್ಠ ಹಾಸ್ಯ ನಟನೆ: ಬೆಂಗಳೂರು ಸಮಷ್ಠಿ ತಂಡ ‘ನೀರು ಕುಡಿಸಿದ ನೀರೆಯರು’ ನಾಟಕದ ಮಲ್ಲಿ ಪಾತ್ರಧಾರಿಣಿ ಸೌಮಶ್ರೀ (2000ರೂ., ಸ್ಮರಣಿಕೆ)
ಶ್ರೇಷ್ಠ ಬಾಲನಟನೆ: ಬೆಳಗಾವಿ ಸವದತ್ತಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ತಂಡದ ಜಾಳ ಪೋಳ ನಾಟಕದ ಶಶ್ಯಾ ಪ್ರಾತಧಾರಿ ನಂದಿತಾ.
ಮೆಚ್ಚುಗೆ ಬಹುಮಾನಗಳು: ಮಾಯಾ ಬೇಟೆ ನಾಟಕದ ಕಲಾವತಿ, ನಾಯೀಕತೆ ನಾಟಕದ ಅಶ್ವಿತಾ ಹೆಗಡೆ, ಮೀಡಿಯ ನಾಟಕದ ನೂತನ್ ಕುಮಾರ್, ನೀರು ಕುಡಿಸಿದ ನೀರೆಯರು ನಾಟಕದ ತನುಜಾ ರುದ್ರಯ್ಯ, ಮರ ಗಿಡ ಬಳ್ಳಿ ನಾಟಕ ಪೂರ್ಣೇಶ್ ಆಚಾರ್.
ಮಾಯಾ ಬೇಟೆ ನಾಟಕದ ಕಲಾವತಿ, ನಾಯೀಕತೆ ನಾಟಕದ ಅಶ್ವಿತಾ ಹೆಗಡೆ, ಮೀಡಿಯ ನಾಟಕದ ನೂತನ್ ಕುಮಾರ್, ನೀರು ಕುಡಿಸಿದ ನೀರೆಯರು ನಾಟಕದ ತನುಜಾ ರುದ್ರಯ್ಯ, ಮರ ಗಿಡ ಬಳ್ಳಿ ನಾಟಕದ ಪೂರ್ಣೇಶ್ ಆಚಾರ್. ನ.21ರಿಂದ ಡಿ.2ರವರೆಗೆ 12ದಿನಗಳ ಕಾಲ ನಡೆದ ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಪ್ರೊ.ಎಂ.ಎಲ್. ಸಾಮಗ, ಜಯರಾಂ ನೀಲಾವರ, ಬಾಸುಮಾ ಕೊಡಗು, ಪಿ.ಬಿ.ಪ್ರಸನ್ನ, ಪ್ರಭಾಕರ ತುಮರಿ ಸಹಕರಿಸಿದ್ದರು.
ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಜನವರಿ 4ರ ಶನಿವಾರ ಮತ್ತು 40ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸ್ಮರಣ ಸಂಚಿಕೆ ಕಲಾಂಜಲಿ ಬಿಡುಗಡೆ ಕಾರ್ಯಕ್ರಮ ಜ.5ರ ರವಿವಾರ ಸಂಜೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಸಮಷ್ಠಿ ಬೆಂಗಳೂರು ತಂಡದ ‘ನೀರು ಕುಡಿಸಿದ ನೀರೆಯರು’ ನಾಟಕದ ಮರು ಪ್ರದರ್ಶನ ಇರುವುದು ಎಂದು ರಂಗಭೂಮಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.