ಜಾಗತಿಕ ತಾಪಮಾನದ ಉಲ್ಭಣತೆಯ ಕುರಿತು ಪ್ರಬಂಧ ಸ್ಪರ್ಧೆ
ಉಡುಪಿ, ಡಿ.3: ಶಿವಮೊಗ್ಗ ಅಬ್ಬಲಗೆರೆ ಪರಿಸರ ಅಧ್ಯಯನ ಕೇಂದ್ರ, ಅಂತಾರಾಷ್ಟ್ರೀಯ ಪರ್ಯಾಯ ಶಕ್ತಿ ಪ್ರತಿಷ್ಠಾನ ಉಡುಪಿ ಹಾಗೂ ಪ್ರೊ. ಅಶೋಕ್ ಕುಂದಾಪುರ ಕುಟುಂಬದ ಪ್ರಯೋಜಕತ್ವದಲ್ಲಿ ಜಾಗತಿಕ ತಾಪ ಮಾನದ ಉಲ್ಭಣತೆಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪರಿಸರದಲ್ಲಿ ನೋಡುತ್ತಿರುವ ಬದ ಲಾವಣೆಗಳ ಬಗ್ಗೆ ಎಫೋರ್ ಅಳತೆಯ ಹಾಳೆಗಳಲ್ಲಿ ಎರಡು ಪುಟಗಳಿಗೆ ಮೀರದಂತೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆದು ಡಿ.20 ರೊಳಗೆ ಕಳುಹಿಸಬೇಕು ಎಂದು ಪ್ರೊ.ಅಶೋಕ್ ಕುಂದಾಪುರ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಫಲಕದೊಂದಿಗೆ ಪ್ರಥಮ 10ಸಾವಿರ ರೂ., ದ್ವಿತೀಯ 5 ಸಾವಿರ ನಗದು, ತೃತೀಯ 3ಸಾವಿರ ರೂ., ಐದು ಮಂದಿಗೆ ತಲಾ 2000ರೂ. ನಗದು ಬಹುಮಾನಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳ ಹೆಸರು, ಶಾಲೆ ಹಾಗೂ ವಿಳಾಸವನ್ನು ಬೇರೆಯೇ ಪುಟದಲ್ಲಿ ಬರೆದು ಪ್ರಬಂಧದ ಜೊತೆಯಲ್ಲಿ ಪರಿಸರ ಅಧ್ಯಯನ ಕೇಂದ್ರ(ರಿ), ರತ್ನಾಕರ ನಗರ, ಅಬ್ಬಲಗೆರೆ ಅಂಚೆ, ಶಿವಮೊಗ್ಗ- 577204ಕ್ಕೆ ಕಳುಹಿಸಬೇಕು. ವಿಜೇತರಿಗೆ ಬಹುಮಾನ ವನ್ನು ಜ.3ರಂದು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.